ಬಿಎಂಎಸ್ ಜೈ ಜವಾನ್ ಕುರುಂಜಿಬಾಗ್ ನಲ್ಲಿ ಹಿರಿಯ ಅಟೋ ಚಾಲಕ ಮುಸ್ತಫಾ ಅಂಜಿಕ್ಕಾರ್ ರವರ ಹುಟ್ಟಹಬ್ಬ ಆಚರಣೆ
ಸುಳ್ಯ: ನಗರದ ಕುರುಂಜಿ ಬಾಗ್‌ನಲ್ಲಿರುವ ಬಿಎಂಎಸ್ ಜೈ ಜವಾನ್ ಆಟೋ ನಿಲ್ದಾಣದ ವತಿಯಿಂದ ಹಿರಿಯ ಅಟೋ ಚಾಲಜ ಸಮಾಜ ಸೇವಕ ಶ್ರೀ ಮುಸ್ತಫಾ ಅಂಜಿಕ್ಕಾರ್ ಅವರ ಹುಟ್ಟುಹಬ್ಬವನ್ನು ಅತ್ಯಂತ ಸಡಗರ ಹಾಗೂ ಆತ್ಮೀಯತೆಯಿಂದ ಆಚರಿಸಲಾಯಿತು.
ಈ ವಿಶೇಷ ಸಂದರ್ಭದಲ್ಲಿ ನೆರೆದಿದ್ದ ಆಟೋ ಚಾಲಕ-ಮಾಲೀಕರು ಶ್ರೀ ಮುಸ್ತಫಾ ಅಂಜಿಕ್ಕಾರ್ ಅವರಿಗೆ ಹೂಗುಚ್ಛ ನೀಡಿ, ಶಾಲು ಹೊದಿಸಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದರು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಹಾಗೂ ಅಟೋ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಡವರು ಮತ್ತು ಕಷ್ಟದಲ್ಲಿದ್ದವರಿಗೆ ಸದಾ ಸ್ಪಂದಿಸುವ ಅವರ ಗುಣವನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿ ಅವರಿಗೆ ಮತ್ತಷ್ಟು ಯಶಸ್ಸು, ಆರೋಗ್ಯ ಹಾಗೂ ಆಯುರಾರೋಗ್ಯ ಸಿಗಲೆಂದು ಹಾರೈಸಿದರು.ಕಾರ್ಯಕ್ರಮದಲ್ಲಿ ಎಲ್ಲರೂ ಪರಸ್ಪರ ಸಿಹಿ ಹಂಚಿಕೊಳ್ಳುವ ಮೂಲಕ ಸಂತಸವನ್ನು ವ್ಯಕ್ತಪಡಿಸಿದರು.
ತಮ್ಮ ಹುಟ್ಟುಹಬ್ಬದ ದಿನದಂದು ಅಭಿಮಾನಿಗಳು, ಸ್ನೇಹಿತರು ಹಾಗೂ ಆಟೋ ನಿಲ್ದಾಣದ ಬಂಧುಗಳು ತೋರಿದ ಈ ಅಪಾರ ಪ್ರೀತಿ, ಗೌರವ ಮತ್ತು ಆಶೀರ್ವಾದಕ್ಕೆ ಶ್ರೀ ಮುಸ್ತಫಾ ಅಂಜಿಕ್ಕಾರ್ ಅವರು ಎಲ್ಲರಿಗೂ ತಮ್ಮ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

