ಸುಳ್ಯ: ತಾಲೂಕಿನ ಗೂನಡ್ಕ ಸಮೀಪದ ರಾಷ್ಟ್ರೀಯ ಹೆದ್ದಾರಿ 275ಕ್ಕೆ ಅತಿ ಹತ್ತಿರದಲ್ಲಿರುವ ದೊಡ್ಡಡ್ಕದ ಕಾರ್ಣಿಕದ ಮಣ್ಣಿನಲ್ಲಿ ಮೇ 21ರಂದು ಪರಮಪೂಜ್ಯ ಸ್ವಾಮಿ ಕೊರಗಜ್ಜನ ಹರಕೆಯ ಕೋಲ ಸೇವೆಯು ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಲಿದೆ.

ಅಜ್ಜನ ವಿಗ್ರಹ ಪ್ರತಿಷ್ಠಾಪನಾ ದಿನದ ಅಂಗವಾಗಿ ಈ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅಂದು ಬೆಳಿಗ್ಗೆಯಿಂದಲೇ ವಿವಿಧ ಪೂಜಾ ವಿಧಿವಿಧಾನಗಳು ಹಾಗೂ ಕೋಲ ಸೇವೆ ಆರಂಭವಾಗಲಿದೆ. ಈ ಪುಣ್ಯ ದಿನದಂದು ವಿಶೇಷ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಪವಿತ್ರ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಸ್ವಾಮಿ ಕೊರಗಜ್ಜನ ದರ್ಶನ ಪಡೆದು ಅಜ್ಜನ ‘ಕರಿಗಂಧ ಪ್ರಸಾದ’ವನ್ನು ಸ್ವೀಕರಿಸಬೇಕೆಂದು ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದೆ.




