ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಅತ್ಯತ್ತಮ ಚಿತ್ರ ಮಾಡಿ ಪ್ರೇಕ್ಷಕರ ಮನಸೂರೆಗೊಂಡ ಸುಳ್ಯದವರೇ ನಿರ್ಮಿಸಿ ನಿರ್ದೇಶಿಸಿದ ಭಾವ ತೀರ ಯಾನ ಇದೀಗ ಸುಳ್ಯದ ಭಾರತ್ ಸಿನೆಮಾಸ್ ನಲ್ಲಿ ದಿನಾಂಕ ಮೇ 8ರಂದು ಮರುಬಿಡುಗಡೆಗೊಳ್ಳುತ್ತಿದ್ದು ಸುಳ್ಯ ಮತ್ತು ಗ್ರಾಮೀಣ ಪ್ರೇಕ್ಷಕರಿಗೆ ಸಿನೆಮಾ ವೀಕ್ಷಿಸಲು ಅವಕಾಶ ಸಿಗುತ್ತಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲಿ ಮಾತನಾಡಿದ ಸುಳ್ಯದ ಹಿರಿಯ ಮುಂದಾಳು ಎಂ ಬಿ ಸದಾಶಿವರು ನಮ್ಮ ಸ್ಥಳೀಯ ಪ್ರತಿಭೆಗಳ ಸಿನಿಮಾ ನಮ್ಮ ಜನರಿಗೆ ನೋಡಲು ಅವಕಾಶ ಸಿಗುತ್ತಿದೆ. ಚೊಚ್ಚಲ ಪ್ರಯತ್ನದಲ್ಲೇ ಉತ್ತಮ ಚಿತ್ರ ನಿರ್ಮಿಸಿದ ನಿರ್ದೇಶಕರು ಮತ್ತು ನಿರ್ಮಾಪಕರು ಅಭಿನಂದನೆಗೆ ಅರ್ಹರು. ಸಿನಿಮಾ ಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸಿ ಎಂದರು. ಪತ್ರಿಕಾಗೋಷ್ಠಿಯಲಿ ನಿರ್ಮಾಪಕ ಶೈಲೇಶ್ ಅಂಬೆಕಲ್ಲು,ಶ್ರೀ ಹರಿ ಪೈಂದೋಡಿ, ವಿದ್ಯಾಶಾರದೆ, ಗಂಗಾಧರ್ ಪಿ ಎಸ್, ಲತಾಶ್ರೀ ಸುಪ್ರೀತ್ ಉಪಸ್ಥಿತರಿದ್ದರು.
ಭಾವ ತೀರ ಯಾನ ಚಿತ್ರವು ಸುಳ್ಯದ ಸಂತೋ಼ಷ್ ಭಾರತ್ ಸಿನೆಮಾಸ್ ನಲ್ಲಿ ಮೇ 8 ರಂದು ರಾತ್ರಿ 7 ಗಂಟೆಗೆ ಸುಳ್ಯದಲ್ಲಿ ಪ್ರಥಮ ಪ್ರದರ್ಶನ ನೀಡಲಿದೆ.

