ಕರ್ನಾಟಕ ಸ್ಟೇಟ್ ಸುನ್ನಿ ಯುವಜನ ಸಂಘ ರಾಜ್ಯ ಸಮಿತಿ ವತಿಯಿಂದ ನಾಳೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಲಿರುವ ಮಾದರಿ ಮದುವೆ ಅಭಿಯಾನ ಸಮಾರೋಪ ಸಮ್ಮೇಳನ ಹಾಗೂ ಜನಜಾಗೃತಿ ಕಾರ್ಯಕ್ರಮದ ಕುರಿತು ಸುನ್ನಿ ಯುವಜನ ಸಂಘ ಸುಳ್ಯ ವತಿಯಿಂದ ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಮೂಲಕ ಮಾಹಿತಿಯನ್ನು ನೀಡಿದರು.
ಮದುವೆ ಪವಿತ್ರ ಕಾರ್ಯವನ್ನು ಅನಾಚಾರ ಮತ್ತು ಅಧಾರ್ಮಿಕತೆಯ ಮೂಲಕ ನಡೆಸುವುದು ಇದಲ್ಲದೆ ಇನ್ನಿತರ ಅನಿಷ್ಟ ಪದ್ದತಿ ಮತ್ತು ಆಚಾರ ವಿಚಾರಗಳಿಂದ ಕೂಡಿದ ಮದುವೆ ಸಮಾರಂಭಗಳು ಇತ್ತೀಚಿನ ಕಾಲದಲ್ಲಿ ನಡೆಯುತ್ತಿದೆ ಇದರ ವಿರುದ್ಧ ಸಮಾಜ ಅರಿವು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾದರಿ ಮದುವೆ ಅಭಿಯಾನವನ್ನು ಆರಂಬಿಸಿ ಇದರ ಸಮಾರೋಪ ಸಮಾರಂಭ ಪುತ್ತೂರಿನಲ್ಲಿ ಮೆ.2 ರಂದು ನಡೆಯಲಿದೆ.



ಅಭಿಯಾನ ಸಮಾರೋಪ ಸಂಜೆ 4 ಗಂಟೆಗೆ ದರ್ಬೆಯಿಂದ ಕಿಲ್ಲೆ ಮೈದಾನ ವರೆಗೆ ಕಾಲ್ನಡಿಗೆ ಜಾಥ ನಡೆಯಲಿದೆ.
ಸಂಜೆ 5.30ಕ್ಕೆ ಖುರತ್ತುಸಾದತ್ ವೇದಿಕೆಯಲ್ಲಿ ಸಮಾರೋಪ ಸಮ್ಮೇಳನ ನಡೆಯಲಿದೆ.
ಜಾಗತಿಕ ಇಸ್ಲಾಮಿ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಇಂಡಿಯನ್ ಗ್ರ್ಯಾಂಡ್ ಮುಪ್ತಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಮಾದರಿ ಮದುವೆ ಅಬಿಯಾನ ಸಮಾರೋಪ ಭಾಷಣ ಮಾಡಲಿದ್ದಾರೆ.
ಸುನ್ನಿ ಜಂಯ್ಯತ್ತುಲ್ ಉಲಮಾ ಕರ್ನಾಟಕ ರಾಜ್ಯಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ (ಮಾಣಿ ಉಸ್ತಾದ್) ಉದ್ಘಾಟಿಸಲಿದ್ದಾರೆ.
ಸಮಸ್ತ ಉಲಮಾ ಒಕ್ಕೂಟದ ಕಾರ್ಯದರ್ಶಿ ಪೇರೊಡ್ ಅಬ್ದುಲ್ ರಹಿಮಾನ್ ಸಖಾಫಿ ದಿಕ್ಸೂಚಿ ಬಾಷಣ ಮಾಡಲಿದ್ದಾರೆ.



ಕರ್ನಾಟಕ ವಿಧಾನ ಸಭಾ ಸ್ಪೀಕರ್ ಯು ಟಿ ಖಾದರ್, ಪುತ್ತೂರು ಶಾಸಕ ಅಶೋಕ್ ರೈ ಸೇರಿದಂತೆ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ನಾಯಕರುಗಳು ಬಾಗವಹಿಸಲಿದ್ದಾರೆ.
ಇದೇ 850 ಬಡ ಕುಟುಂಬದ ಸದಸ್ಯರ ಸಾಮೂಹಿಕ ವಿವಾಹ ಕಾರ್ಯ ನಡೆಸಿಕೊಟ್ಟ ದೇವರ್ ಶೋಲ ಅಬ್ದುಲ್ ಸಲಾಂ ಮುಸ್ಲಿಯಾರ್ ಹಾಗೂ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಈ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡಿ ಯಶಸ್ವಿ ಗೊಳಿಸಲು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ಮೂಲಕ ತಿಳಿಸಿದರು.
ಗೋಷ್ಠಿಯಲ್ಲಿ ಸುನ್ನಿ ಯುವಜನ ಸಂಘ ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ,ಎಸ್ ಎಂ ಎ ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ಲತೀಫ್ ಹರ್ಲಡ್ಕ, ಕೆಎಂಜೆ ಅಧ್ಯಕ್ಷ ಅಬ್ದುಲ್ ಹಮೀದ್ ಸುಣ್ಣಮೂಲೆ ,ಸುನ್ನಿ ಸಂಘಟನೆಗಳ ಪಧಾದಿಕಾರಿಗಳಾದ ಲತೀಫ್ ಅಡ್ಕಾರ್, ಸಿದ್ದೀಕ್ ಕಟ್ಟೆಕ್ಕಾರ್, ಸಿದ್ದೀಕ್ ಗೂನಡ್ಕ, ಸಿರಾಜ್ ಸಹದಿ ಅಲೆಕ್ಕಾಡಿ, ಸಮೀರ್ ಜಯನಗರ ಉಪಸ್ಥಿತರಿದ್ದರು





