ದಿನಾಂಕ 29-04-2026 ರಂದು ಸುಳ್ಯದ ಸುನ್ನಿ ಸೆಂಟರ್‌ನಲ್ಲಿ ಎಸ್ ವೈ ಎಸ್ ಸುಳ್ಯ ಝೋನ್ ಕಮಿಟಿಯ ವಾರ್ಷಿಕ ಮಹಾಸಭೆಯು ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಸಭೆಯಲ್ಲಿ ಕಳೆದ ಸಾಲಿನ ಸಂಘಟನಾ ವರದಿ ಮತ್ತು ಲೆಕ್ಕಪತ್ರಗಳನ್ನು ಮಂಡಿಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರು ವರದಿ ಮತ್ತು ಲೆಕ್ಕಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಸರ್ವಾನುಮತದಿಂದ ಅದಕ್ಕೆ ಅಂಗೀಕಾರ ನೀಡಿದರು.



ವರದಿ ಮಂಡನೆಯ ನಂತರ ಮುಂದಿನ ಅವಧಿಗಾಗಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯ ನಿರ್ಧಾರದಂತೆ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸಿದ್ದೀಕ್ ಬಿ.ಎ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಹಾಗೂ ಶಮೀರ್ ಮೊಗರ್ಪಣೆ ಅವರನ್ನು ಕೋಶಾಧಿಕಾರಿಯನ್ನಾಗಿ ನೇಮಕಗೊಳಿಸಲಾಯಿತು. ಸಂಘಟನಾ ವಿಭಾಗದ ಜವಾಬ್ದಾರಿಯನ್ನು ಹನೀಫ್ ಸಖಾಫಿ ಬೆಳ್ಳಾರೆ (ಉಪಾಧ್ಯಕ್ಷರು) ಮತ್ತು ಹಾರಿಸ್ ಸಿ.ಏ (ಕಾರ್ಯದರ್ಶಿ) ಅವರಿಗೆ ವಹಿಸಲಾಯಿತು.
ದಅವಾ ಮತ್ತು ಟ್ರೈನಿಂಗ್ ವಿಭಾಗದ ನೇತೃತ್ವವನ್ನು ಲತೀಫ್ ಜೊಹರಿ ಮೇನಾಲ ಮತ್ತು ಹನೀಫ್ ಮದನಿ ಮಂಡೆಕೋಲು ಅವರಿಗೆ ನೀಡಲಾಗಿದ್ದರೆ, ಸಾಂತ್ವನ ಮತ್ತು ಇಸಾಬ ವಿಭಾಗದ ಹೊಣೆಯನ್ನು ಸಿದ್ದೀಕ್ ಗೂನಡ್ಕ ಹಾಗೂ ರಝಾಕ್ ಆಲೆಕ್ಕಾಡಿ ಅವರಿಗೆ ಹಂಚಿಕೆ ಮಾಡಲಾಯಿತು. ಮೀಡಿಯಾ ವಿಭಾಗಕ್ಕೆ ಅಶ್ರಫ್ ಸಾಹುಕಾರ್ ಹಾಗೂ ಕಲ್ಚರಲ್ ವಿಭಾಗಕ್ಕೆ ಲತೀಫ್ ಅಡ್ಕಾರ್ ಅವರನ್ನು ಆರಿಸಲಾಯಿತು.



ಇವರೊಂದಿಗೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜುನೈದ್ ಸಖಾಫಿ, ಫೈಝಲ್ ಝುಹುರಿ, ಇಬ್ರಾಹಿಂ ಹಾಜಿ, ಲತೀಫ್ ಹರ್ಲಡ್ಕ, ಅದ್ದು ಫಾಝ್, ಅಬ್ದುಲ್ಲಾ ಮೊಗರ್ಪಣೆ, ಹಸೈನಾರ್ ಗುತ್ತಿಗಾರು, ಅಶ್ರಫ್ ಸಅದಿ ಮತ್ತು ಅಶ್ರಫ್ ನೆಲ್ಯಮಜಲು ಅವರುಗಳು ನೇಮಕಗೊಂಡರು. ಸಂಘಟನೆಯನ್ನು ಬಲಪಡಿಸುವ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಸಂಕಲ್ಪದೊಂದಿಗೆ ಮಹಾಸಭೆಯು ಮುಕ್ತಾಯಗೊಂಡಿತು.





