ಕಾಮಗಾರಿ ನಡೆಯುತ್ತಿರುವ ಮದ್ರಸ ಕಟ್ಟಡ ವೀಕ್ಷಿಸಿದ ಕಾರ್ಮಿಕರ ಕನಿಷ್ಠ ವೇತನ ಮಂಡಳಿ ಅಧ್ಯಕ್ಷರು

ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕದಲ್ಲಿರುವ ತೆಕ್ಕಿಲ್ ಮೊಹಮದ್ ಹಾಜಿ ಮೆಮೋರಿಯಲ್ ತಕ್ವಿಯತುಲ್ ಇಸ್ಲಾಂ ಮದರಸದ ಮೇಲಂತಸ್ತಿನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಕರ್ನಾಟಕ ಸರ್ಕಾರದ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರು ಹಾಗೂ ಪೇರಡ್ಕ ಗೂನಡ್ಕ ಮೊಹಿಯುದ್ದೀನ್ ಜುಮಾ ಮಸ್ಜಿದ್ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅವರು ಕಾಮಗಾರಿಯನ್ನು ವೀಕ್ಷಿಸಿದರು.

ನಿರ್ಮಾಣ ಹಂತದಲ್ಲಿರುವ ಕಟ್ಟಡದ ಗುಣಮಟ್ಟ ಮತ್ತು ಪ್ರಗತಿಯನ್ನು ಪರಿಶೀಲಿಸಿದ ಅವರು, ಈ ಯೋಜನೆಯು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅತ್ಯಂತ ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಪೇರಡ್ಕ ಗೂನಡ್ಕ ಮೊಹಿಯುದ್ದೀನ್ ಜುಮಾ ಮಸ್ಜಿದ್ ಖತೀಬ್ ನಹೀಂ ಫೈಝಿ ಅಲ್ ಮಹಬರಿ, ಪೇರಡ್ಕ ಗೂನಡ್ಕ ಜಮಾತ್ ಉಪಾಧ್ಯಕ್ಷರಾದ ಟಿ ಬಿ ಹನೀಫ್ ತೆಕ್ಕಿಲ್ ಹಾಗೂ ಪ್ರಮುಖರಾದ ಮೊಯಿದು ದರ್ಕಾಸ್ ಗೂನಡ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸ್ಥಳೀಯ ಜಮಾತ್ ಮುಖಂಡರು ಕಾಮಗಾರಿಯ ವಿವರಗಳನ್ನು ಈ ವೇಳೆ ಹಂಚಿಕೊಂಡರು.

Leave a Reply

Discover more from

Subscribe now to keep reading and get access to the full archive.

Continue reading