ಅರಂತೋಡು ಬದ್ರಿಯಾ ಜುಮಾ ಮಸೀದಿ ಆಶ್ರಯದಲ್ಲಿ 22ನೇ ವಾರ್ಷಿಕ ದಿಕ್ರ್ ಸ್ವಲಾತ್ ಮಜಲಿಸ್ ಮತ್ತು ಮರ್‌ಹೂಮ್ ಡಾ ಕೆ.ಎಂ ಶಾಹ್ ಮುಸ್ಲಿಯಾರ್ ಅವರ 7ನೇ ವರ್ಷದ ಅನುಸ್ಮರಣೆಯು ಅತ್ಯಂತ ವಿಜೃಂಭಣೆಯಿಂದ ಎಪ್ರಿಲ್ 30ರಂದು ನಡೆಯಿತು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಅಸೈಯದ್ ಅಲ್ ಹಾಜ್ ಎನ್ ಪಿ ಯಂ ಝೈನುಲ್ ಆಬಿದ್ದೀನ್ ತಂಙಳ್ ವಹಿಸಿದ್ದರು. ಅವರು ದಿಕ್ರ್ ಸ್ವಲಾತ್ ನೇತೃತ್ವವನ್ನು ವಹಿಸಿ ವಿಶೇಷ ದುವಾಃ ಆರ್ಶೀವಚನ ಮಾಡಿದರು.



ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಆಸೀಫ್ ಆಝ್‌ಹರಿ ಸಮಾರಂಭವನ್ನು ಉದ್ಘಾಟಿಸಿ ಚಾಲನೆ ನೀಡಿದರು. ಪೇರಡ್ಕ ಮುಹೀದ್ಧೀನ್ ಜಮಾ ಮಸೀದಿಯ ಖತೀಬರಾದ ಅಹಮ್ಮದ್ ನೈಈಂ ಫೈಝಿ ಅವರು ಅನುಸ್ಮರಣಾ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಬಹು ಮಹಮ್ಮದ್ ಆಸಿಫ್ ಅಲ್ ಅಝ್ ಹರಿ ಕೊಕ್ಕೆಜಾಲ್ ರವರು ಧಾರ್ಮಿಕ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಯಾಗಿ ಕರ್ನಾಟಕ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್ ಭಾಗವಹಿಸಿದ್ದರು. ಅರಂತೋಡು ಜಮಾತ್ ಅಧ್ಯಕ್ಷ ಅಶ್ರಫ್ ಗುಂಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ದಿಕ್ರ್ ಸ್ವಲಾತ್ ಅಧ್ಯಕ್ಷ ಕೆ ಎಸ್ ಇಬ್ರಾಹಿಂ ಕುಕ್ಕುಂಬಳ, ಬಿಳಿಯಾರು ಮಸೀದಿ ಇಮಾಮ್ ಸಂಶುದ್ದೀನ್ ಪೈಝಿ, ಸದರ್ ರೌಫ್ ಅಝ್ ಹರಿ, ಮದರಸ ಸಹಾಯಕ ಅಧ್ಯಾಪಕ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಉಪಸ್ಥಿತರಿದ್ದರು.



ಇವರೊಂದಿಗೆ ಮಾಜಿ ಅಧ್ಯಕ್ಷರುಗಳಾದ ಹಾಜಿ ಕೆ ಎಂ ಮಹಮ್ಮದ್, ಕೆ ಎಂ ಅಬೂಬಕ್ಕರ್ ಪಾರೆಕ್ಕಲ್, ಹಾಜಿ ಅಬ್ದುಲ್ ಖಾದರ್ ಪಠೇಲ್ ಮತ್ತು ಅನ್ವರ್ ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಮಜೀದ್ ಭಾಗವಹಿಸಿದ್ದರು. ಅನಿವಾಸಿ ಗಣ್ಯರಾದ ದುಬೈ ಸಮಿತಿ ಅಧ್ಯಕ್ಷ ಜಿ ಬದುರುದ್ದೀನ್ ಪಠೇಲ್, ಅನಿವಾಸಿ ಉದ್ಯಮಿ ಸೈಫುಧೀನ್ ಪಟೇಲ್ ದುಬೈ ಹಾಗೂ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಜುಬೈರ್ ಎಸ್. ಇ ಉಪಸ್ಥಿತರಿದ್ದರು.
ಜಮಾತ್ ಕಾರ್ಯದರ್ಶಿ ಕೆ ಎಂ ಮೂಸಾನ್, ಹಮೀದ್ ಹಾಜಿ ಸುಳ್ಯ, ಹಾಜಿ ಅಹಮದ್ ಸುಪ್ರೀಂ, ಮದರಸ ಸಂಚಾಲಕ ಅಮೀರ್ ಕುಕುಂಬಳ, ದಿಕ್ರ್ ಸ್ವಲಾತ್ ಕಾರ್ಯದರ್ಶಿ ಸಂಶುದ್ದೀನ್ ಕೆ ಎ ಯು, ಕೋಶಾಧಿಕಾರಿ ಸಂಶುದ್ಧೀನ್ ಪೆಲ್ತಡ್ಕ, ಸಂಶುದ್ದೀನ್ ಕ್ಯೂರ್ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಭಕ್ತಾದಿಗಳಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.





