ಎಲಿಮಲೆಯಲ್ಲಿ ಮೇ 1ರಂದು ಸ್ವಲಾತ್ ವಾರ್ಷಿಕ


ಎಲಿಮಲೆ ಬದ್ರಿಯಾ ಜಮಾಅತ್ ಕಮಿಟಿ ವತಿಯಿಂದ ಮೇ ಒಂದರಂದು ಸ್ವಲಾತ್ ವಾರ್ಷಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಬಹಮಾನ್ಯರಾದ ಸಯ್ಯದ್ ಮುಹ್ಸಿನ್ ತಂಙಳ್ ಎಲಿಮಲೆ ಇವರ ನೇತೃತ್ವದಲ್ಲಿ ನಡೆಸಿಕೊಂಡು ಬರುವ ಮಾಸಿಕ ಸ್ವಲಾತ್ ನ ವಾರ್ಷಿಕ ಸಂಭ್ರಮವಾಗಿದೆ ಇದು.

ಎಲಿಮಲೆ ಸ್ವಲಾತ್ ವಾರ್ಷಿಕ ಮಹಾಸಂಗಮವು 2026ರ ಮೇ 01ನೇ ಶುಕ್ರವಾರದಂದು ಮಗರಿಬ್ ನಮಾಜ್ ಬಳಿಕ ನಡೆಯಲಿದೆ. ಎಲಿಮಲೆ ಮುದರ್ರಿಸ್ ಸಯ್ಯಿದ್ ಮುಹ್ಸಿನ್ ಸಯ್ಯಿದಲವಿ ಕೋಯ ತಂಙಳ್ ಅವರು ಈ ಧಾರ್ಮಿಕ ಕಾರ್ಯಕ್ರಮದ ನೇತೃತ್ವವನ್ನು ವಹಿಸಲಿದ್ದಾರೆ.

ಮುಖ್ಯ ಪ್ರಭಾಷಣಗಾರರಾಗಿ ಸಮದ್ ಸಖಾಫಿ ಮಾಯನಾಡ್ ಅವರು ಭಾಗವಹಿಸಿ ಉಪನ್ಯಾಸ ನೀಡಲಿದ್ದಾರೆ. ವೇದಿಕೆಯಲ್ಲಿ ಹಾರಿಸ್ ಸುರೈಜಿ ಸಖಾಫಿ, ಹಾಫಿಳ್ ಹಾಶಿರ್ ಸಖಾಫಿ, ಸಿದ್ದೀಕ್ ಹಿಮಮಿ ಹಾಗೂ ಜಲೀಲ್ ಮುಈನಿ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸುವ ಮಹಿಳೆಯರಿಗಾಗಿ ಪ್ರತ್ಯೇಕ ಸ್ಥಳಾವಕಾಶದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬದ್ರಿಯಾ ಜಮಾಅತ್ ಕಮಿಟಿಯು ಎಲ್ಲರನ್ನು  ಪ್ರೀತಿಯಿಂದ ಸ್ವಾಗತಿಸಿದೆ.

Leave a Reply

Discover more from

Subscribe now to keep reading and get access to the full archive.

Continue reading