ಅತ್ಯಾಧುನಿಕ ಸೌಕರ್ಯಗಳ ಜತೆ ರೋಗಿಗಳ ಚಿಕಿತ್ಸೆಗೆ ಸರ್ವಸನ್ನದ್ಧವಾಗಿದೆ ಮೆಡ್ ಲಾಂಡ್ ಆಸ್ಪತ್ರೆ

ಪುತ್ತೂರಿನ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇದೀಗ ನುರಿತ ತಜ್ಞ ವೈದ್ಯರಿಂದ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವಿವಿಧ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿ ನಡೆಯುತ್ತಿವೆ.

ಆಸ್ಪತ್ರೆಯಲ್ಲಿ ಲ್ಯಾಪ್ರೊಸ್ಕೋಪಿ (Laparoscopy) ವಿಧಾನದಲ್ಲಿ ಕಡಿಮೆ ನೋವು ಮತ್ತು ವೇಗವಾದ ಚೇತರಿಕೆಗೆ ಸಹಾಯಕವಾಗುವ ಶಸ್ತ್ರಚಿಕಿತ್ಸೆಗಳು ಲಭ್ಯವಿದ್ದು, ಮಹಿಳೆಯರ ಗರ್ಭಕೋಶ ಸಂಬಂಧಿತ ಸಮಸ್ಯೆಗಳಿಗೆ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಗರ್ಭಕೋಶದ ಶಸ್ತ್ರಚಿಕಿತ್ಸೆಗಳು (Hysterectomy) ಹಾಗೂ ಮೂತ್ರ ಕೋಶಗಳಿಗೆ ಹಾಗೂ ಕಿಡ್ನಿ ಸ್ಟೋನ್ ಸಂಬಂಧಿತ ಶಸ್ತ್ರಚಿಕೆತ್ಸೆಗಳು ಅನುಭವಸಂಪನ್ನ ವೈದ್ಯರ ಮೇಲ್ವಿಚಾರಣೆಯಲ್ಲಿ ಸುರಕ್ಷಿತವಾಗಿ ನೆರವೇರಿಸಲಾಗುತ್ತಿದೆ.

ಇದಲ್ಲದೆ, ಎಲುಬು ಮತ್ತು ಕೀಲು ತಜ್ಞರಿಂದ ACL (Anterior Cruciate Ligament) ಪುನರ್ ನಿರ್ಮಾಣ ಶಸ್ತ್ರಚಿಕಿತ್ಸೆ ಹಾಗೂ ಮೊಣಕಾಲಿನ ಸಂಪೂರ್ಣ ಬದಲಾವಣೆ (Total Knee Replacement – TKR) ಚಿಕಿತ್ಸೆಗಳು ಕೂಡ ಯಶಸ್ವಿಯಾಗಿ ನಡೆಸಲಾಗುತ್ತಿವೆ.

ಆಸ್ಪತ್ರೆಯು ಅತ್ಯಾಧುನಿಕ ಉಪಕರಣಗಳು, ಅನುಭವಿಗಳಾದ ವೈದ್ಯರು ಮತ್ತು ರೋಗಿ ಕೇಂದ್ರಿತ ಸೇವೆಗಳ ಮೂಲಕ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.

ಡಾ.ಆಸಿಯ ಅಫ್ರಾ ಇಸ್ಮಾಯಿಲ್ ನೇತೃತ್ವದಲ್ಲಿ ಪ್ರಸೂತಿ ಮತ್ತು ಹೆರಿಗೆ ತಜ್ಞ ವೈದ್ಯರ ಸಂಪೂರ್ಣ ತಂಡವೊಂದು ಇಲ್ಲಿ ಕಾರ್ಯಚರಿಸುತ್ತಿದ್ದು ಅದೇ ರೀತಿ ನುರಿತ ಎಲುಬು ತಜ್ಞರಾಗಿರುವ ಡಾ.ನಂದಕಿಶೋರ್ ಭಟ್ ನೇತೃತ್ವದಲ್ಲಿ ಎಲುಬು ಮತ್ತು ಕೀಲು ತಜ್ಞರ (ORTHO) ತಂಡವು ವಿವಿಧ ಶಸ್ತ್ರಚಿಕೆತ್ಸೆಗಳು ಬಹಳ ಯಶಸ್ವಿಯಾಗಿ ನಡೆಯುತ್ತಿದೆ.ಜನರಲ್ ಮೆಡಿಸಿನ್ ವಿಭಾಗದಲ್ಲಿ ಅತ್ಯಾಧುನಿಕ ಐ ಸಿ ಯು ಚಿಕೆತ್ಸೆ ಸಹಿತ ಸಾಮಾನ್ಯ ವೈದ್ಯಕೀಯ ಸೇವೆಯನ್ನು ಡಾ ವಿಶಾಲ್ ಯು ಪಿ ಹಾಗೂ ಖ್ಯಾತ ಮಧುಮೇಹ ತಜ್ಞ ವೈದ್ಯೆ ಡಾ.ಸ್ವಾತಿ ಪಿ ಇವರು ನೀಡುತ್ತಿದ್ದಾರೆ.

ದಿನದ 24 ಘಂಟೆಗಳಲ್ಲೂ ಕಾರ್ಯಾಚರಿಸುತ್ತಿರುವ ಅತ್ಯಾಧುನಿಕ ಲ್ಯಾಬ್, ಡಿಜಿಟಲ್ X-ray, ಫಾರ್ಮಸಿ ಜೊತೆಗೆ ಎಮರ್ಜೆನ್ಸಿ ವಿಭಾಗ ಹಾಗೂ ರಾತ್ರಿಯ ಸಮಯದಲ್ಲಿ ಮುಂಜಾನೆಯ ವರೆಗೆ ಮಕ್ಕಳ ಪರಿಣಿತ ವೈದ್ಯರಾದ ಡಾ.ಚೇತನ್ ಎಸ್ ತಾಂಡೇಲ್ ಕೂಡ ಸೇವೆಗೆ ಲಭ್ಯರಿರುತ್ತಾರೆ.

ವರದಿ :- ಮಾಧ್ಯಮ ವಿಭಾಗ, ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ.ಸಂಪ್ಯ ಪುತ್ತೂರು
+91 73495 62155

Leave a Reply

Discover more from

Subscribe now to keep reading and get access to the full archive.

Continue reading