ಜಯನಗರದಲ್ಲಿ ಮಾಸಿಕ ಅಜ್ಮೀರ್ ಮೌಲಿದ್ ಹಾಗೂ ಹಜ್ಜಾಜ್‌ಗಳಿಗೆ ಬೀಳ್ಕೊಡುಗೆ ಸಮಾರಂಭ

ಸುಳ್ಯ: ಜನ್ನತುಲ್ ಉಲೂಂ ಮದ್ರಸ ಮತ್ತು ಮಸೀದಿ ಜಯನಗರ ಇದರ ವತಿಯಿಂದ ಮಾಸಿಕ ಅಜ್ಮೀರ್ ಮೌಲಿದ್ ಕಾರ್ಯಕ್ರಮವು ಏಪ್ರಿಲ್ 26, 2026ರಂದು ಮಗ್ರಿಬ್ ನಮಾಜಿನ ಬಳಿಕ ಜಯನಗರದಲ್ಲಿ ನಡೆಯಲಿದೆ.

ಕಾರ್ಯಕ್ರಮದ ನೇತೃತ್ವವನ್ನು ಜಯನಗರದ ಸದರ್ ಮುಅಲ್ಲಿಂ ಬಹು| ಶಫೀಖ್ ಹಿಮಮಿ ಸಖಾಫಿ ಹಾಗೂ ಬಹು| ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಜಯನಗರ ಅವರು ವಹಿಸಲಿದ್ದಾರೆ

ಖ್ಯಾತ ವಿದ್ವಾಂಸರಾದ ಎನ್.ಪಿ.ಎಂ. ಸಯ್ಯದ್ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಕುನ್ನುಂಗೈ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಇದೇ ಸಂದರ್ಭದಲ್ಲಿ ಪವಿತ್ರ ಹಜ್ಜ್ ಯಾತ್ರೆಗೆ ತೆರಳಲಿರುವ ಹಜ್ಜಾಜ್‌ಗಳಿಗೆ ಬೀಳ್ಕೊಡುಗೆ ಸಮಾರಂಭವನ್ನೂ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶದ ವ್ಯವಸ್ಥೆ ಮಾಡಲಾಗಿದ್ದು, ಕೊನೆಯಲ್ಲಿ ತಬರುಕ್ ವಿತರಣೆ ನಡೆಯಲಿದೆ. ಈ ಪುಣ್ಯ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading