ಸುಳ್ಯದ ಕರಾವಳಿ ಕಾಂಪ್ಲೆಕ್ಸ್‌ನಲ್ಲಿ ‘ಓನಿಕ್ಸ್ ಡ್ರೈ ಫ್ರೂಟ್ಸ್ & ನಟ್ಸ್’ ನೂತನ ಮಳಿಗೆಯ ಶುಭಾರಂಭ: ಗ್ರಾಹಕರಿಗೆ ವಿಶೇಷ ಕಾಂಬೋ ಘೋಷಣೆ

ಸುಳ್ಯ: ನಗರದ ಮೆಗಾ ಶಾಪ್ ಸಮೀಪದ ಕರಾವಳಿ ಕಾಂಪ್ಲೆಕ್ಸ್‌ನಲ್ಲಿ ನವಾಜ್ ಬೆಳ್ಳಾರೆ ಅವರ ಮಾಲಕತ್ವದ ನೂತನ ಉದ್ಯಮ ‘ಓನಿಕ್ಸ್ ಡ್ರೈ ಫ್ರೂಟ್ಸ್ & ನಟ್ಸ್’ ಶೋ ರೂಮ್ ಇಂದು ಅದ್ದೂರಿಯಾಗಿ ಉದ್ಘಾಟನೆಗೊಂಡಿತು.

ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಟಿ. ಎಂ. ಶಾಹಿದ್ ಅವರು ಮಳಿಗೆಯನ್ನು ಉದ್ಘಾಟಿಸಿ, ಹೊಸ ಉದ್ಯಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸುಳ್ಯದ ಪ್ರಮುಖ ಗಣ್ಯರು ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರದ (ಸೂಡಾ) ಅಧ್ಯಕ್ಷರಾದ ಕೆ. ಎಂ. ಮುಸ್ತಫ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶಾಹುಲ್ ಹಮೀದ್ ಕುತ್ತಮೊಟ್ಟೆ ಹಾಗೂ ಸಿಟಿ ರೋಟರಿ ಕ್ಲಬ್ ಅಧ್ಯಕ್ಷರಾದ ಹೇಮಂತ್ ಕಾಮತ್ ಪಾಲ್ಗೊಂಡಿದ್ದರು. ಯುವ ಉದ್ಯಮಿ ರಂಜಿತ್ ಕುರುಂಜಿಬಾಗ್, ವರ್ತಕರ ಸಂಘದ ಅಧ್ಯಕ್ಷರಾದ ಅಬ್ದುಲ್ ಹಮೀದ್ ಜನತಾ ಮತ್ತು ಅಲ್ಪಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಎಲಿಮಲೆ ಅವರು ಉಪಸ್ಥಿತರಿದ್ದು ಶುಭ ಕೋರಿದರು.

ನಗರ ಪಂಚಾಯತ್‌ನ ನಿಕಟಪೂರ್ವ ಸದಸ್ಯರುಗಳಾದ ಉಮ್ಮರ್ ಕೆ. ಎಸ್ ಮತ್ತು ಸಿದ್ದೀಕ್ ಕೊಕ್ಕೊ, ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಮಜೀದ್ ಜನತಾ, ಜನತಾ ಗ್ರೂಪ್ಸ್‌ನ ಅಬ್ದುಲ್ ಮಜೀದ್ ಹಾಗೂ ಅನಿವಾಸಿ ಉದ್ಯಮಿಗಳಾದ ಹಾಜಿ ಎಸ್. ಎಂ ಅಬ್ದುಲ್ ಹಮೀದ್, ಅಬ್ದುಲ್ ರೆಹ್ಮಾನ್ ಎಸ್ ಎಂ, ಮಹಮೂದ್ ಬೆಳ್ಳಾರೆ ಮತ್ತು ಶುಕೂರ್ ಹಾಜಿ ಸೇರಿದಂತೆ ಹಲವು ಪ್ರಮುಖರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ನವಾಜ್ ಬೆಳ್ಳಾರೆ ಅವರಿಗೆ ಅಭಿನಂದನೆ ಸಲ್ಲಿಸಿದರು.

ಮಳಿಗೆಯ ಉದ್ಘಾಟನೆಯ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ದರಗಳನ್ನು ಘೋಷಿಸಲಾಗಿದೆ. ಎಲ್ಲಾ ರೀತಿಯ ಉತ್ತಮ ಗುಣಮಟ್ಟದ ಡ್ರೈ ಫ್ರೂಟ್ಸ್‌ಗಳನ್ನು ಒಳಗೊಂಡಿರುವ ವಿಶೇಷ ‘ಕೊಂಬೊ ಪ್ಯಾಕ್’ ಅತ್ಯಂತ ಆಕರ್ಷಕ ಬೆಲೆಯಲ್ಲಿ ಲಭ್ಯವಿದ್ದು, ಗ್ರಾಹಕರು ಈ ರಿಯಾಯಿತಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ಮಾಲಕ ನವಾಜ್ ಬೆಳ್ಳಾರೆ ತಿಳಿಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading