ಹರ್ಲ ಫೌಂಡೇಶನ್ ಲೋಗೋ ಬಿಡುಗಡೆ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವು ಸುಳ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.
ಸುಳ್ಯದ ಪ್ರಮುಖ ಸಾಮಾಜಿಕ ಧಾರ್ಮಿಕ ಮುಖಂಡರಾದ ಲತೀಫ್ ಹರ್ಲಡ್ಕ ಅವರ ನೇತೃತ್ವದ ಹರ್ಲ ಫೌಂಡೇಶನ್ ಸಂಸ್ಥೆಯ ನೂತನ ಲೋಗೋವನ್ನು ಅಖಿಲ ಭಾರತೀಯ ಜಂಇಯ್ಯತುಲ್ ಉಲಮಾ ಇದರ ಪ್ರಧಾನ ಕಾರ್ಯದರ್ಶಿಗಳಾದ ಸಯ್ಯದ್ ಇಬ್ರಾಹಿಂ ಖಲೀಲ್ ಬುಖಾರಿ ತಂಜಳ್ ಕಡಲುಂಡಿ ಅವರು ಅಧಿಕೃತವಾಗಿ ಅನಾವರಣಗೊಳಿಸಿದರು.



ಇದೇ ಸಮಾರಂಭದಲ್ಲಿ, ಶೀಘ್ರದಲ್ಲೇ ಅಮೇರಿಕಾ ಪ್ರವಾಸ ಕೈಗೊಳ್ಳಲಿರುವ ಗೌರವಾನ್ವಿತ ಸಯ್ಯದ್ ಇಬ್ರಾಹಿಂ ಖಲೀಲ್ ಬುಖಾರಿ ತಂಜಳ್ ಅವರಿಗೆ ಹರ್ಲ ಫೌಂಡೇಶನ್ ವತಿಯಿಂದ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಹಾಜಿ ಕೆ.ಎಂ. ಮುಸ್ತಫಾ, ಅನ್ಸಾರಿಯ ಮುದರಿಸ್ ಅಬೂಬಕ್ಕರ್ ಹಿಮಮಿ ಸಖಾಫಿ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶರೀಫ್ ಜಟ್ಟಿಪಳ್ಳ ಹಾಗೂ ಕಬೀರ್ ಜಟ್ಟಿಪಳ್ಳ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು. ಈ ಸಂಸ್ಥೆಯು ಮುಂದಿನ ದಿನಗಳಲ್ಲಿ ಸಾಮಾಜಿಕವಾಗಿ ಹೆಚ್ಚಿನ ಸೇವೆ ಸಲ್ಲಿಸಲಿ ಎಂದು ಗಣ್ಯರು ಹಾರೈಸಿದರು.




