ಬೆಂಗಳೂರಿನಲ್ಲಿ ಫಿಸಿಯೋ ಕ್ಲಿನಿಕ್ ತೆರೆಯುತ್ತಿರುವ ಸುಳ್ಯದ ಡಾ| ಹಸನ್ ಮುಝಮ್ಮಿಲ್ ಜೀರ್ಮುಕ್ಕಿ

ಸುಳ್ಯದ ಡಾ| ಹಸನ್ ಮುಝಮ್ಮಿಲ್ ಜೀರ್ಮುಕ್ಕಿ ಮಾಲಕತ್ವದಲ್ಲಿ ಬೆಂಗಳೂರಿನ ಬೇಗೂರು ರೋಡಿನಲ್ಲಿ ಮೈತ್ರಿ ಫಿಸಿಯೋ ಕ್ಲಿನಿಕ್ ಇದೇ ಬರುವ ಎಪ್ರಿಲ್ ಇಪ್ಪತ್ತನೇ ತಾರೀಕಿನಂದು ಉದ್ಘಾಟನೆಗೊಳ್ಳಲಿದೆ.

ಡಾ| ಮುಝಮ್ಮಿಲ್ ಅವರು ಸುಳ್ಯ ತಾಲೂಕು ನೆಲ್ಲೂರು ಕೆಮ್ರಾಜೆ ಗ್ರಾಮದ ಜೀರ್ಮುಕ್ಕಿಯ ಮೊಯಿದು ಕುಂಞಿ ಮತ್ತು ಆಯಿಷಾ ದಂಪತಿಗಳ ಪುತ್ರ.

ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ‌ಶಾಲೆ ದೇವಚಳ್ಳ ಎಲಿಮಲೆ ,ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಜೂನಿಯರ್ ಕಾಲೇಜು ಸುಳ್ಯ ಇಲ್ಲಿ ಮುಗಿಸಿರುತ್ತಾರೆ. ನಂತರ ಫಾದರ್ ಮುಲ್ಲರ್ಸ್ ಮಂಗಳೂರಿನಲ್ಲಿ ಮುಂದಿನ ಶಿಕ್ಷಣ ಪಡೆದು ಮೂರು ವರ್ಷಗಳಿಂದ ಫಿಸಿಯೋತೆರಪಿ ಡಾಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಸ್ವಂತ ಕ್ಲಿನಿಕ್ ತೆರೆಯುವ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ.

One thought on “ಬೆಂಗಳೂರಿನಲ್ಲಿ ಫಿಸಿಯೋ ಕ್ಲಿನಿಕ್ ತೆರೆಯುತ್ತಿರುವ ಸುಳ್ಯದ ಡಾ| ಹಸನ್ ಮುಝಮ್ಮಿಲ್ ಜೀರ್ಮುಕ್ಕಿ

Leave a Reply

Discover more from

Subscribe now to keep reading and get access to the full archive.

Continue reading