ಐಪಿಎಲ್ ಟೀಮುಗಳಲ್ಲಿ ಫಾಲೋವರ್ಸ್ ಯಾರಿಗೆ ಹೆಚ್ಚು?

ಐಪಿಎಲ್ 2026: ಇನ್ಸ್ಟಾಗ್ರಾಮ್ ಸಾಮ್ರಾಜ್ಯದಲ್ಲಿ ಯಾವ ತಂಡಕ್ಕೆ ಎಷ್ಟು ಬೆಂಬಲ ಇದೆ ಎಂದು ಇಲ್ಲಿ ವಿವರಿಸಲಾಗಿದೆ. ದೇಶಾದ್ಯಂತ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಹಬ್ಬದ ಸಡಗರ ಮನೆ ಮಾಡಿದೆ. ಮೈದಾನದಲ್ಲಿ ಸಿಕ್ಸರ್-ಬೌಂಡರಿಗಳ ಸುರಿಮಳೆಯಾಗುತ್ತಿದ್ದರೆ, ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ಮುಖ್ಯವಾಗಿ ಇನ್ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳ ಫಾಲೋಯಿಂಗ್ ಸಮರ ಜೋರಾಗಿದೆ. ಕ್ರಿಕ್‌ಟ್ರಾಕರ್ (CricTracker) ಬಿಡುಗಡೆ ಮಾಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ತಂಡಗಳ ಪಟ್ಟಿಯಲ್ಲಿ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ಮುಂಚೂಣಿಯಲ್ಲಿದೆ.

1.ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): “ಈ ಸಲ ಕಪ್ ನಮ್ದೇ” ಎಂಬ ಘೋಷವಾಕ್ಯದೊಂದಿಗೆ ಅತಿ ಹೆಚ್ಚು ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ, 23 ಮಿಲಿಯನ್ ಫಾಲೋವರ್ಸ್‌ಗಳೊಂದಿಗೆ ಇನ್ಸ್ಟಾಗ್ರಾಮ್‌ನಲ್ಲಿ ನಂಬರ್ 1 ಸ್ಥಾನವನ್ನು ಅಲಂಕರಿಸಿದೆ. ವಿರಾಟ್ ಕೊಹ್ಲಿ ಅವರ ಜನಪ್ರಿಯತೆ ತಂಡದ ಈ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.
2. ಚೆನ್ನೈ ಸೂಪರ್ ಕಿಂಗ್ಸ್ (CSK): ಎಂ.ಎಸ್. ಧೋನಿ ನೇತೃತ್ವದ ‘ಯೆಲ್ಲೋ ಆರ್ಮಿ’ ಆರ್‌ಸಿಬಿಗೆ ತೀವ್ರ ಪೈಪೋಟಿ ನೀಡುತ್ತಿದ್ದು, 22.8 ಮಿಲಿಯನ್ ಫಾಲೋವರ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
3. ಮುಂಬೈ ಇಂಡಿಯನ್ಸ್ (MI): ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮುಂಬೈ ತಂಡವು 19.5 ಮಿಲಿಯನ್ ಫಾಲೋವರ್ಸ್‌ಗಳೊಂದಿಗೆ ಮೂರನೇ ಅತಿ ದೊಡ್ಡ ಫ್ಯಾನ್ ಬೇಸ್ ಹೊಂದಿದೆ.
ಇತರೆ ತಂಡಗಳ ಫಾಲೋವರ್ಸ್ ವಿವರ ಹೀಗಿದೆ:
ಟಾಪ್ ಮೂರು ತಂಡಗಳ ನಂತರ ಉಳಿದ ತಂಡಗಳ ನಡುವೆ ದೊಡ್ಡ ಅಂತರವಿರುವುದು ಕಂಡುಬಂದಿದೆ. ಆ ಪಟ್ಟಿ ಇಲ್ಲಿದೆ:

ಕೋಲ್ಕತ್ತಾ ನೈಟ್ ರೈಡರ್ಸ್ (KKR)** -7.9
ರಾಜಸ್ಥಾನ್ ರಾಯಲ್ಸ್ (RR) -5.9
ಸನ್ ರೈಸರ್ಸ್ ಹೈದರಾಬಾದ್ (SRH) -5.6
ಪಂಜಾಬ್ ಕಿಂಗ್ಸ್ (PBKS)- 5.0
ಗುಜರಾತ್ ಟೈಟಾನ್ಸ್ (GT)- 4.9
ಡೆಲ್ಲಿ ಕ್ಯಾಪಿಟಲ್ಸ್ (DC)- 4.8
ಲಕ್ನೋ ಸೂಪರ್ ಜೈಂಟ್ಸ್ (LSG)- 3.8

ಪಟ್ಟಿಯನ್ನು ಗಮನಿಸಿದರೆ ಹಳೆಯ ಮತ್ತು ಯಶಸ್ವಿ ತಂಡಗಳಾದ RCB, CSK ಮತ್ತು MI ತಂಡಗಳು ಸಾಮಾಜಿಕ ಜಾಲತಾಣದಲ್ಲಿ ಏಕಸ್ವಾಮ್ಯ ಹೊಂದಿವೆ. ಹೊಸದಾಗಿ ಸೇರ್ಪಡೆಗೊಂಡ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ತಂಡಗಳು ಅಲ್ಪ ಅವಧಿಯಲ್ಲಿ ಉತ್ತಮ ಫಾಲೋಯಿಂಗ್ ಗಳಿಸಿದ್ದರೂ, ದಿಗ್ಗಜ ತಂಡಗಳನ್ನು ಮೀರಿಸಲು ಇನ್ನು ಸಾಕಷ್ಟು ಹಾದಿ ಸಾಗಬೇಕಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ ಕೇವಲ ಮೈದಾನದ ಆಟವಾಗಿ ಉಳಿಯದೆ, ಡಿಜಿಟಲ್ ಜಗತ್ತಿನಲ್ಲಿ ಒಂದು ದೊಡ್ಡ ಬ್ರ್ಯಾಂಡ್ ಆಗಿ ಬೆಳೆದಿರುವುದಕ್ಕೆ ಈ ಅಂಕಿಅಂಶಗಳೇ ಸಾಕ್ಷಿ.
*ಮಾಹಿತಿ ಕೃಪೆ: CricTracker

Leave a Reply

Discover more from

Subscribe now to keep reading and get access to the full archive.

Continue reading