ಪ್ರಜಾಧ್ವನಿ ಕರ್ನಾಟಕ ವತಿಯಿಂದ ಎನ್ ಎಮ್ ಸಿ ಯಲ್ಲಿ ಸಂವಾದ ಕಾರ್ಯಕ್ರಮಕ್ಕೆ ಆಹ್ವಾನ

ಸುಳ್ಯದ ನೆಹರೂ ಸ್ಮಾರಕ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ಪ್ರಯುಕ್ತ ಸಂವಾದ ಕಾರ್ಯಕ್ರಮ

ಸುಳ್ಯ:ಭಾರತ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ, ಪ್ರಜಾಧ್ವನಿ ಕರ್ನಾಟಕ ಮತ್ತು ನೆಹರೂ ಸ್ಮಾರಕ ಕಾಲೇಜು, ಸುಳ್ಯ ಇವುಗಳ ಜಂಟಿ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗಾಗಿ ವಿಶೇಷ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ದಿನಾಂಕ 16 ಏಪ್ರಿಲ್ 2026, ಗುರುವಾರ.
ಸಮಯ ಪೂರ್ವಾಹ್ನ 10:30 ಗಂಟೆಗೆ
ನೆಹರೂ ಸ್ಮಾರಕ ಕಾಲೇಜು ಸಭಾಭವನ, ಸುಳ್ಯ ಇಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮವು ನಾಡಿನ ಪ್ರಮುಖ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದ್ದು, ಶೈಕ್ಷಣಿಕ ಮತ್ತು ಸಾಮಾಜಿಕ ವಿಚಾರಗಳ ಕುರಿತು ಬೆಳಕು ಚೆಲ್ಲಲಿದೆ.

ಅಧ್ಯಕ್ಷತೆಯನ್ನು ಡಾ. ರುದ್ರಕುಮಾರ್ (ಪ್ರಾಂಶುಪಾಲರು, ನೆಹರೂ ಸ್ಮಾರಕ ಕಾಲೇಜು, ಸುಳ್ಯ) ಇವರು ವಹಿಸಲಿದ್ದಾರೆ.
ಶ್ರೀಮತಿ ಸುಚಿತ್ರಾ ಜನಾರ್ದನ್ (ಪ್ರಾಧ್ಯಾಪಕರು, ಕೆ.ವಿ.ಜಿ ಕಾನೂನು ಕಾಲೇಜು, ಸುಳ್ಯ). ಇವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿಕೊಡಲಿದ್ದಾರೆ.
ಸಾಮಾಜಿಕ ಚಿಂತಕರಾದ ಶ್ರೀ ಅಶೋಕ ಎಡಮಲೆ ಅವರಿಂದ ಪ್ರಾಸ್ತಾವಿಕ ನುಡಿ ಇರಲಿದೆ.

ಅಂಬೇಡ್ಕರ್ ಜಯಂತಿಯ ಸಂಭ್ರಮದೊಂದಿಗೆ, ವಿದ್ಯಾರ್ಥಿಗಳಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳು, ಸಂವಿಧಾನದ ಆಶಯಗಳು ಮತ್ತು ಸಾಮಾಜಿಕ ಸಮಾನತೆಯ ಕುರಿತು ಜಾಗೃತಿ ಮೂಡಿಸುವುದು ಈ ಸಂವಾದ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳು ನೇರವಾಗಿ ಅತಿಥಿಗಳೊಂದಿಗೆ ಸಂವಾದ ನಡೆಸುವ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

ಪ್ರಜಾಧ್ವನಿ ಕರ್ನಾಟಕ ಮತ್ತು ನೆಹರೂ ಸ್ಮಾರಕ ಕಾಲೇಜು ಆಡಳಿತ ಮಂಡಳಿಯು ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸವಿನಯ ಆಮಂತ್ರಣವನ್ನು ನೀಡಿದೆ.

Leave a Reply

Discover more from

Subscribe now to keep reading and get access to the full archive.

Continue reading