
ಕ್ಯಾಲಿಕಟ್: ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ, ಮರ್ಕಝ್ ವಿದ್ಯಾ ಸಮುಚ್ಚಯದ ಶಿಲ್ಪಿ ಹಾಗೂ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರಿಗೆ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೊಂದಾಯಿತ) ವತಿಯಿಂದ ಪ್ರತಿಷ್ಠಿತ ‘ಸಜ್ಜನ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಜ್ಜನ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆ ಅವರು ಕೇರಳದ ಕ್ಯಾಲಿಕಟ್‌ನಲ್ಲಿರುವ ಕಾರಂದೂರು ಮರ್ಕಝ್‌ಗೆ ತೆರಳಿ ಪ್ರಶಸ್ತಿ ಪ್ರದಾನ ಮಾಡಿ, ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಅಭಿನಂದಿಸಿದರು.
ಸಾಮಾಜಿಕ ಸೇವೆ, ಶೈಕ್ಷಣಿಕ ಪ್ರಗತಿ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರು ಸಲ್ಲಿಸಿರುವ ಕೊಡುಗೆ ಅಪಾರ ಎಂದು ಡಾ. ಉಮ್ಮರ್ ಬೀಜದಕಟ್ಟೆ ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೊಂದಾಯಿತ)ಯ ನಿರ್ದೇಶಕರಾದ ಶರೀಫ್ ಜಟ್ಟಿಪಳ್ಳ, ನಾಲೆಡ್ಜ್ ಸಿಟಿ ನಿರ್ದೇಶಕರಾದ ರವೂಫ್, ಸಜ್ಜನ ಹಿತೈಷಿಗಳಾದ ಹಮೀದ್ ಸುಳ್ಯ, ಶಂಸುದ್ದೀನ್ ಹಾಸನ, ಅಬ್ದುಲ್ಲಾ ಪೆರಂಗೋಡಿ, ಅನ್ಶೀಫ್ ಪೇರಡ್ಕ ಹಾಗೂ ಮರ್ಝೂಕ್ ಕಡೆಪಾಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

