

ಬಿಜೆಪಿ ಮತ್ತು ಗ್ಯಾನೇಷ್ ಕುಮಾರ್ ನಿಜಬಣ್ಣ ಬಯಲು ಮಾಡಿದ SIR. ಇದರ ವಿರುದ್ಧ ನಿರಂತರ ಹೋರಾಡುತ್ತಿರುವ ರಾಹುಲ್ ಗಾಂಧಿ ಆಧುನಿಕ ಮಹಾತ್ಮಬಿಜೆಪಿಯ ಬಿ.ಎಲ್.ಎ-2 ಮೂಲಕ ಮತಕಳ್ಳತನ ನಡೆಸಲು ಪ್ರಯತ್ನಿಸಿದ ಕಾರಣಕ್ಕೆ ನೈತಿಕ ಹೊಣೆಹೊತ್ತು ಬಿಜೆಪಿಯ. ರಾಜ್ಯಾಧ್ಯಕ್ಷರು ರಾಜಿನಾಮೆ ಕೊಡಬೇಕು.
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಹಿರಿಯರೆಲ್ಲರ ಇಚ್ಚೆಯಂತೆ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂಲಕ ರಚಿಸಲ್ಪಟ್ಟ ಸಂವಿದಾನದಲ್ಲಿನ ಆಶಯದಂತೆ ರೂಪಗೊಂಡ ಸರ್ವಜನಾಂಗದ ಶಾಂತಿಯ ತೋಟವಾದ ಭಾರತದ ಪ್ರಜಾಪ್ರಭುತ್ವದ ತಾಯಿಬೇರನ್ನು ತುಂಡರಿಸಲು ಬಿಜೆಪಿ ತನ್ನ ಬಿಎಲ್ಎ-2 ಗಳ ಮೂಲಕ ಪ್ರಯತ್ನಪಟ್ಟಿರುವುದು ಇದೀಗ ಜಗಜ್ಜಾಹೀರಾಗಿದೆ.
ಒಂದು ಕಡೆ ವಿಶ್ರಾಂತಿಯಿಲ್ಲದೆ ಭಾರತದ ಚುನಾವಣಾ ಆಯೋಗದ ಪ್ರಮುಖರಾದ ಗ್ಯಾನೇಷ್ ಕುಮಾರ್ ಸುಪ್ರೀಂ ಕೋರ್ಟ್ ಮೇಲೆ ಸುಳ್ಳು ಆರೋಪ ಹೊರಿಸಿ, ಸುಳ್ಳು ಹೇಳಿ ಫಾರಾಂ ನಂಬರ್ 6 ನಲ್ಲಿ ತನಗಿಷ್ಟ ಬಂದಂತೆ ತನ್ನೊಳಗಿನ ಕೋಮುವಾದೀ ಮನೋಭಾವದೊಂದಿಗೆ ತಿದ್ದುಪಡಿಗಳನ್ನು ಮಾಡಿ ಸಂವಿದಾನದ ಆಶಯಕ್ಕೆ ವಿರುದ್ಧವಾಗಿ ನಡಕೊಂಡಿರುವುದು ಅಕ್ಷಮ್ಯ ಅಪರಾಧ.
ಇದು ಅನ್ಯಾಯ ಮತ್ತು ಅಕ್ರಮವಾದ್ದರಿಂದ ರಾಜಕೀಯ ಕಾರಣಗಳಿಗಲ್ಲದೆ ಭಾರತದ ಮೇಲೆ ನಿಜವಾಗಿಯೂ ಪ್ರೀತಿಯಿರುವವರು ಎಲ್ಲರೂ ಇದನ್ನು ಖಂಡಿಸಲೇಬೇಕು. ಮತ್ತು ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ಪ್ರತಿಯೊಬ್ಬರು ಬೀಧಿಗಿಳಿದು ಹೋರಾಡಲೇಬೇಕಿದೆ.
ದೇಶದಲ್ಲಿ ಹುಟ್ಟಿ ಈ ಮಣ್ಣಿನ ಮಕ್ಕಳಾಗಿದ್ದರೂ ಕೂಡಾ ಅವರ ನಂಬಿಕೆ ಮಾತ್ರ ಬೇರೆ ಎನ್ನುವ ಕಾರಣಕ್ಕೆ, ಅವರು ನಮ್ಮವರಲ್ಲ ಎನ್ನುವಂತೆ, ಒಂದು ಪ್ರತ್ಯೇಕ ಜನಾಂಗದ ವಿರುದ್ಧ ಒಳಸಂಚು ನಡೆಸಿದ್ದು ದೇಶದ್ರೋಹದ ಕೃತ್ಯ.
ಇಡೀ ದೇಶದಾದ್ಯಂತ ತಮ್ಮ ಬಿ.ಎಲ್.ಎ-2 ಗಳ ಮೂಲಕ ಫಾರಂ 7 ಅನ್ನು ಬಳಸಿ ಬದುಕಿದ್ದವರನ್ನೇ ಸತ್ತಿದ್ದಾರೆಂದು ಸುಳ್ಳು ಹೇಳಿ ಮತದಾರರ ಪಟ್ಟಿಯಿಂದ ಲಕ್ಷಾಂತರ ಮಂದಿಯನ್ನು ಅಕ್ರಮವಾಗಿ ಕೀಳಲು ಪಟ್ಟ ಪ್ರಯತ್ನ ಇದೀಗ ಹೊರಬಿದ್ದು ಬಿಜೆಪಿಯ ನಿಜ ಬಣ್ಣವನ್ನು ಬಯಲು ಮಾಡಲಾಗಿದೆ.
ಹೀಗೆ ಸುಳ್ಳು ಹೇಳಿ ಮತಗಳ್ಳತನ ಮಾಡಿ ಸಿಗೋ ಗೆಲುವು ಗೆಲುವೇ ಅಲ್ಲ ಆದ್ದರಿಂದಲೇ ಬಿಜೆಪಿ ಮತಕಳ್ಳತನ ಮಾಡಿ ಗೆದ್ದಿದೆ ಎಂದು ಕಾಂಗ್ರೆಸ್ ನಿರಂತರವಾಗಿ ಆರೋಪಿಸುತ್ತಿದೆ. ಈಬಗ್ಗೆ ಪ್ರಥಮವಾಗಿ ಮಾತನಾಡಿದ ರಾಹುಲ್ ಗಾಂಧಿಯವರ ಆರೋಪಗಳು ಇದೀಗ ಸತ್ಯ ಎನ್ನುವುದು ಇಡೀ ಜಗತ್ತಿಗೆ ಗೊತ್ತಾಗಿದೆ.
ಹೀಗೇ ಮುಂದುವರಿದರೆ ನಮ್ಮ ಮುಂದಿನ ತಲೆಮಾರುಗಳಿಗೆ ಪ್ರಜಾಪ್ರಭುತ್ವವೇ ಉಳಿಯದು.ಆದ್ದರಿಂದ ಇದರ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವ ರಾಹುಲ್ ಗಾಂಧಿ ಆದುನಿಕ ಮಹಾತ್ಮ ಗಾಂಧಿಯಾಗಿ ಮಾರ್ಪಟ್ಟಿದ್ದಾರೆ. ಇವರ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಹೋರಾಡುತ್ತಿರುವ ಎಲ್ಲಾ ಹೋರಾಟಗಾರರಿಗೆ ಬೆಂಬಲವನ್ನು ಸೂಚಿಸಿ ಬೀಧಿಗಿಳಿದು ಹೋರಾಡಬೇಕಿದೆ ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರಾದ ಜಾನಿ.ಕೆ.ಪಿ.ಪತ್ರಿಕಾ ಹೇಳಿಕೆ ನೀಡಿರುತ್ತಾರೆ.

