ಮಾಣಿ : ಇಲ್ಲಿನ ಹಳೀರ ಬಳಿ ಫ್ಲೈ ಓವರ್ ಶುರುಆಗುವ ರಸ್ತೆಯ ಮೇಲೆ ಆಲ್ಟೋ ಕಾರು ಮತ್ತು ಟೆಂಪೋ ಪಿಕಪ್ ವಾಹನಗಳ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಮಹಿಳೆಯರು ಗಂಭೀರ ಗಾಯಗೊಂಡ ಘಟನೆ ಸೋಮವಾರ ಬೆಳಿಗ್ಗೆ 6 ಗಂಟೆಯ ವೇಳೆಗೆ ನಡೆದಿದೆ,ಪುತ್ತೂರು, ಮಡಿಕೇರಿ ಮೈಸೂರು ರಸ್ತೆಗೆ ಪ್ರವೇಶ ಮಾಡಬೇಕಾದ ಹಳೀರದ ಸರ್ವಿಸ್ ರಸ್ತೆಯು ಗೊಂದಲಗಳಿಂದ ಕೂಡಿದ್ದು ಅಪಘಾತಗಳು ಹೆಚ್ಚೆಚ್ಚು ನಡೆಯಲು ಕಾರಣ ಎಂದು ಸ್ಥಳೀಯರು ದೂರುತ್ತಿದ್ದರು,ಹೊರಗಿನಿಂದ ಬಂದವರಿಗೆ ಈ ಸರ್ವಿಸ್ ರಸ್ತೆಯು ಮಡಿಕೇರಿ ಮೈಸೂರು ಮಹಾನಗರಕ್ಕೆ ಪ್ರವೇಶ ರಸ್ತೆ ಎಂದು ಸರಿಯಾಗಿ ತಿಳಿಯದೆ ವಾಹನ ಚಾಲನೆಯಲ್ಲಿ ಗೊಂದಲ ಉಂಟಾಗುತ್ತಿರುವುದು ದಿನೇ ಸಾಮಾನ್ಯವಾಗಿದೆ,ಕಿರಿದಾದ ಪ್ರವೇಶ ರಸ್ತೆಯು ಸರಿಯಾಗಿ ಗೋಚರಿಸದೇ ಇರುವುದು ಮತ್ತು ಯಾವುದೇ ಸೂಚನಾ ಫಲಕ ಕೂಡಾ ಇಲ್ಲದೇ ಇರುವುದು ಹಲವಾರು ಗೊಂದಲಗಳಿಗೆ ಕಾರಣವಾಗುತ್ತಿದೆ,ಗಂಭೀರ ಗಾಯಗೊಂಡವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ,ಹೆಚ್ಚಿನ ಮಾಹಿತಿ ತಿಳಿದುಬರಬೇಕಷ್ಟೇ..

