ಸಜ್ಜನ ಪ್ರತಿಷ್ಠಾನದಿಂದ ವಿವಿಧ ಕೊಡುಗೆಗಳ ಹಸ್ತಾಂತರ: ಕಾರುಣ್ಯ ಸೇವೆಯಲ್ಲಿ ಸಜ್ಜನ ಪ್ರತಿಷ್ಠಾನ ಮಾದರಿ:ಅನ್ವರ್ ಶಿರೂರುಕಾರುಣ್ಯ ಸೇವೆಯಲ್ಲಿ ಸಜ್ಜನ ಪ್ರತಿಷ್ಠಾನ ಮಾದರಿ:ಅನ್ವರ್ ಶಿರೂರು

ಎಸ್ ವೈ ಎಸ್ ಮತ್ತು ಆ್ಯಂಬುಲೆನ್ಸ್ ಚಾಲಕ ಮಾಲಕ ಸಂಘಕ್ಕೆ ಆಕ್ಸಿಜನ್ ಸಿಲಿಂಡರ್ ಕೊಡುಗೆ

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಡವರಿಗೆ ಮತ್ತು ವಿವಿಧ ಸಂಘ ಸಂಸ್ಥೆಗಳಿಗೆ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ ಅಗಸ್ಟ್ ತಿಂಗಳಲ್ಲಿ ಸುಳ್ಯ ಮತ್ತು ಬೆಂಗಳೂರಿನ ವಿವಿಧ ಕಡೆಗಳಲ್ಲಿ ನಡೆಯಿತು.
ಅಕ್ಸಿಂಜನ್ ಸಿಲಿಂಡರ್ ಕೊಡುಗೆ
ಸುಳ್ಯ ರೆಡ್ ಕ್ರಾಸ್ ಸಂಸ್ಥೆ ಇದರ ಸಹಕಾರದೊಂದಿಗೆ ಸುಳ್ಯ ಅ್ಯಂಬುಲೆನ್ಸ್ ಚಾಲಕ ಮಾಲಕ ಸಂಘಕ್ಕೆ ಹಾಗೂ ಸುನ್ನಿ ಯುವಜನ ಸಂಘ ಸುಳ್ಯ ಸೇರಿದಂತೆ ಎರಡು ಆಕ್ಸಿಜನ್ ಸಿಲಿಂಡರ್ ಕಿಟ್ಟನ್ನು ಸಂಘದ ಪಧಾದಿಕಾರಿಗಳಿಗೆ ಹಸ್ತಾಂತರ ಮಾಡಲಾಯಿತು.
ಹಸ್ತಾಂತರ ಕಾರ್ಯಕ್ರಮದಲ್ಲಿ ಸಜ್ಜನ ಪ್ರತಿಷ್ಠಾನ ಯುನೈಟೆಡ್ ಅರಬ್ ಎಮಿರೇಟ್ಸ್ ಘಟಕ ಅಧ್ಯಕ್ಷ ಅನ್ವರ್ ಶಿರೂರ್ ಶುಭ ಹಾರೈಸಿ ಸಜ್ಜನ ಪ್ರತಿಷ್ಠಾನ ಕಾರುಣ್ಯ ಸೇವೆಯಲ್ಲಿ ಮಾದರಿ ಕೆಲಸವನ್ನು ಮಾಡುತ್ತಿದೆ ಇದು ನಿಜಕ್ಕೂ ಅಭಿನಂದನಾರ್ಹ ಸೇವೆ ಎಂದರು
ಮುಂದೆಯೂ ಪ್ರತಿಷ್ಠಾನ ಸಜ್ಜನ ಪ್ರತಿಷ್ಠಾನದ ಸಮಾಜ ಕಾರ್ಯಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಭರವಸೆ ನೀಡಿದರು.
ಸುಳ್ಯ ರೆಡ್ ಕ್ರಾಸ್ ಸಭಾಪತಿ ಪಿ ಬಿ ಸುಧಾಕರ ರೈ ಆಕ್ಸಿಜನ್ ಸಿಲಿಂಡರ್ ಹಸ್ತಾಂತರ ಮಾಡಿದರು.
ಎಸ್ ವೈ ಎಸ್ ಪರವಾಗಿ ಸಿದ್ದೀಕ್ ಸಿಲಿಂಡರ್ ಸ್ವೀಕರಿಸಿದರು.
ಆ್ಯಂಬುಲೆನ್ಸ್ ಚಾಲಕ ಮಾಲಕ ಸಂಘಕ್ಕೆ ನೀಡಿದ ಆಕ್ಸಿಜನ್ ಸಿಲಿಂಡರ್ ಕಿಟ್ ಸಂಘದ ಪಧಾದಿಕಾರಿಗಳು ಸ್ವೀಕರಿಸಿದರು ಆಕ್ಸಿಜನ್ ಸಿಲಿಂಡರ್ ಕೊಡುಗೆಯಲ್ಲಿ ಬೆಂಗಳೂರು ಪಾರ್ಮೆಡ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಆರಿಸ್ ಪೇರಡ್ಕ ಸಹಕರಿಸಿದರು.

ಗೂನಡ್ಕ ಶ್ರೀ ಶಾರದಾ ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಟೀಶರ್ಟ್ ವಿತರಣೆ

ಗೂನಡ್ಕ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿವರ್ಷವೂ ನೋಟು ಪುಸ್ತಕ, ಪೆನ್, ಪೆನ್ಸಿಲ್, ಎರೇಸರ್, ಶಾರ್ಪನರ್ ಹಾಗೂ ಟೀಶರ್ಟ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾದ ಇಬ್ರಾಹಿಂ ಗೂನಡ್ಕ ವಿದ್ಯಾರ್ಥಿಗಳಿಗೆ ಟೀಶರ್ಟ್‌ಗಳನ್ನು ವಿತರಿಸಿದರು.
ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷರಾದ ರಾಮಚಂದ್ರ ಕಲ್ಲುಗದ್ದೆ,ಎಸ್.ಪಿ. ಲೋಕನಾಥ್ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ,ಎಸ್‌ಡಿಎಂಸಿ ಅಧ್ಯಕ್ಷೆ ಶ್ರೀಮತಿ ಸೌಮ್ಯ ಸತ್ಯಜಿತ್ ಮುಖ್ಯೋಪಾಧ್ಯಾಯರಾದ ಹನುಮಂತಪ್ಪ ಜಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಯು.ಎಸ್. ಚಿದಾನಂದ ಮಾಸ್ಟರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳಿಗೆ ನೆರವಾಗುವ ಮೂಲಕ ಅವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವ ಸಜ್ಜನ ಪ್ರತಿಷ್ಠಾನದ ಸೇವಾ ಕಾರ್ಯವನ್ನು ಕಾರ್ಯಕ್ರಮದಲ್ಲಿ ಶ್ಲಾಘಿಸಿದರು.

ಬೆಂಗಳೂರಿನ ಸಾಯಿ ಆಶ್ರಮ ಶಾಲೆ ಮಕ್ಕಳಿಗೆ ವಸ್ತ್ರ ಮತ್ತು ಪುಸ್ತಕ ವಿತರಣೆ ಮಾಡಲಾಯಿತು.
ಇದೇ ಸುಳ್ಯದ ಬಡ ಯುವತಿಯ ಮದುವೆಗೆ ಇಪ್ಪತ್ತು ಸಾವಿರ ರೂಪಾಯಿ ದನ ಸಹಾಯ ನೀಡಿದರು.
ಕಾರ್ಯಕ್ರಮದಲ್ಲಿ ಅಶೀಫ್ ಶಿರೂರು ಸಜ್ಜನ ಪ್ರತಿಷ್ಠಾನ ನಿರ್ದೇಶಕ ಶರೀಫ್ ಜಟ್ಟಿಪಳ್ಳ ಹಾಗೂ ಅಯ್ಯೂಬ್ ಗೂನಡ್ಕ, ಮರ್ಜೂಕ್ ಕಡೆಪಾಲ ಇದ್ದರು.

Leave a Reply

Discover more from

Subscribe now to keep reading and get access to the full archive.

Continue reading