ದುಗ್ಗಲಡ್ಕದಲ್ಲಿ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ (SKIMVB) ಇದರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಯಾತುಲ್ ಇಸ್ಲಾಂ ಮದರಸದ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಐಡಿ ಕಾರ್ಡ್‌ಗಳನ್ನು ವಿತರಿಸಲಾಯಿತು. ಈ ಸೇವಾ ಕಾರ್ಯಕ್ಕೆ ಮಿಲಾದ್ ಸಮಿತಿ ಅಧ್ಯಕ್ಷರಾದ ಸುಲೈಮಾನ್ ಡಿ.ಎಂ. ರವರು ಮತ್ತು ಊರಿನ ದಾನಿಗಳೂ ತಮ್ಮ ಅಮೂಲ್ಯವಾದ ಆರ್ಥಿಕ ಕೊಡುಗೆಯನ್ನು ನೀಡಿ ಸಹಕರಿಸಿದರು. ಊರಿನವರ ಸಹಕಾರ ಮತ್ತು ದಾನಿಗಳ ನೆರವಿನಿಂದ ಈ ಕಾರ್ಯವು ನೆರವೇರಿತು.
ಈ ಸಂದರ್ಭದಲ್ಲಿ ಸಯ್ಯಿದ್ NPM ಝೈನುಲ್ ಆಬಿದೀನ್ ತಂಙಳ್, ದುಗ್ಗಲಡ್ಕ ರವರು ಜುಮಾ ನಮಾಜ್ ಬಳಿಕ ಸುಲೈಮಾನ್ ಡಿ.ಎಂ. ಅವರಿಗೆ ಸಮವಸ್ತ್ರ ಹಾಗೂ ಐಡಿ ಕಾರ್ಡ್‌ಗಳನ್ನು ಗೌರವಪೂರ್ವಕವಾಗಿ ಹಸ್ತಾಂತರಿಸಿ, ಮದರಸ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಧಾರ್ಮಿಕ ಪ್ರಗತಿಗೆ ಇಂತಹ ಸೇವಾ ಕಾರ್ಯಗಳು ಇನ್ನಷ್ಟು ಪ್ರೋತ್ಸಾಹ ನೀಡಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ದಾನಿಗಳಾದ ಸುಲೈಮಾನ್ ಡಿ.ಎಂ., ಮಹಲ್ಸ್ ಸಮಿತಿ ಸದಸ್ಯರು, ಮದರಸ ಸದರ್ ಮುಅಲ್ಲಿಮ್ ಅಬ್ದುಲ್ ನಾಸಿರ್ ಮೌಲವಿ, ಸಹ ಅಧ್ಯಾಪಕರಾದ ಮಿರ್ಷಾದ್ ಉಸ್ತಾದ್, ಕಿದ್ಮತುಲ್ ಇಸ್ಲಾಂ ಅಸೋಸಿಯೇಷನ್‌ನ ಪದಾಧಿಕಾರಿಗಳು ಹಾಗೂ ಮದರಸ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮದರಸ ಸದರ್ ಮುಅಲ್ಲಿಮ್ ಅಬ್ದುಲ್ ನಾಸಿರ್ ಮೌಲವಿ ರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜೀಜ್ ಅಜೀರ್ ರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.