ಖಿಳ್ರ್ ಜುಮಾ ಮಸೀದಿ ಶೇರ ಬುಡೋಳಿಯಲ್ಲಿ ದೇಶದ 80ನೇ ಸ್ವಾತಂತ್ರ್ಯೋತ್ಸವ ಬಹಳ ಯಶಸ್ವಿಯಾಗಿ ನಡೆಯಿತು.ಖಿಳ್ರ್ ಜುಮಾ ಮಸೀದಿ ಗೌರವಾನ್ವಿತ ಖತೀಬರಾದ ಸೈಫ್ ಅಲಿ ಸುಲ್ತಾನಿ ಫುರ್ಖಾನಿ ಅಲ್ ಅದವಿ ಉಸ್ತಾದರು ಧ್ವಜಾರೋಹಣದ ನೇತೃತ್ವ ವಹಿಸಿದರು.ಗೌರವಾನ್ವಿತ ಜಮಾಅತ್ ಅಧ್ಯಕ್ಷರಾದ ಡಾ! ಉಮ್ಮರ್ ಫಾರೂಕ್ ರವರು ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿ ಸ್ವಾತಂತ್ರ್ಯ ಸಂದೇಶ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಜಮಾಅತ್ ಗೌರವಾಧ್ಯಕ್ಷರಾದ ಇಬ್ರಾಹಿಂ ಹಾಜಿ,ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಬೀಬ್ ಶೇರ,ಸಮಿತಿಯ ನಾಯಕರಾದ ಅಬ್ದುಲ್ ಹಮೀದ್ ಶೇರ,ಅಬ್ದುಲ್ ಖಾದರ್ ಹಾಜಿ ಶೇರ,ಮುಹಮ್ಮದ್ ಹನೀಫಿ ಬುಡೋಳಿ,ಅಬ್ದುಲ್ ರಝಾಕ್ ಬುಡೋಳಿ,ಮುಹಮ್ಮದ್ ಮುನ್ತಾಕ್ ಅಲ್ ಅದವಿ,ರಾಝಿಕ್ ಶೇರ, ಮುಹಮ್ಮದ್ ಮುಸ್ತಫಾ ಶೇರ ಉಪಸ್ಥಿತರಿದ್ದರು.ಸಿರಾಜುಲ್ ಉಲೂಂ ಮದ್ರಸದ ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವದ ಭಕ್ತಿ ಗೀತೆಗಳನ್ನು ಹಾಡಿದರು,ಕೊನೆಯಲ್ಲಿ ಸಿಹಿತಿಂಡಿ ವಿತರಿಸಿ,ರಾಷ್ಟ್ರಗೀತೆ ಹಾಡಿ,ಧನ್ಯವಾದ ಸಮರ್ಪಿಸಲಾಯಿತು.