ಅಜ್ಜಾವರ: ಶಾಫಿ ಮಡಿಕೇರಿ ಅವರು ಸಾರ್ವಜನಿಕರ ಹಿತದೃಷ್ಟಿಯಿಂದ ಕೈಗೊಂಡ ಸಮಾಜಮುಖಿ ಕೆಲಸವೊಂದು ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಜ್ಜಾವರ ಪೇಟೆಯ ಮುಖ್ಯ ಕಾಂಕ್ರೀಟ್ ರಸ್ತೆಯಲ್ಲಿ ನಿರ್ಮಾಣವಾಗಿದ್ದ ದೊಡ್ಡ ದೊಡ್ಡ ಗುಂಡಿಗಳಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರು.
ಈ ಸಮಸ್ಯೆಗೆ ಸ್ಪಂದಿಸಿದ ಶಾಫಿ ಮಡಿಕೇರಿ ಅವರು, ಸ್ವಯಂಪ್ರೇರಿತರಾಗಿ ಮುಂದೆಬಂದು ಕಾಂಕ್ರೀಟ್ ಬಳಸಿ ರಸ್ತೆಯಲ್ಲಿದ್ದ ದೊಡ್ಡ ಗುಂಡಿಗಳನ್ನು ಶಾಶ್ವತ ರೀತಿಯಲ್ಲಿ ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ರಸ್ತೆಯ ಹದೆಗೆಟ್ಟಿದ್ದ ಭಾಗವನ್ನು ದುರಸ್ತಿಗೊಳಿಸಿದ ಇವರ ಈ ಜನಪರ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರು ಹಾಗೂ ವಾಹನ ಸವಾರರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಪ್ರತಿದಿನ ನೂರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಗುಂಡಿಗಳ ಕಾರಣದಿಂದ ಸಣ್ಣಪುಟ್ಟ ಅಪಘಾತಗಳು ಸಂಭವಿಸುವ ಸಾಧ್ಯತೆಯಿತ್ತು. ಸಾರ್ವಜನಿಕರ ಈ ಕಷ್ಟಕ್ಕೆ ಸ್ಪಂದಿಸಿದ ಶಾಫಿ ಮಡಿಕೇರಿಯವರು ಅಜ್ಜಾವರ ಕಾಂಗ್ರೆಸ್ ಕೋಶಾಧಿಕಾರಿಯಾಗಿದ್ದು ಅವರ ಸಾಮಾಜಿಕ ಕಾಳಜಿ ಮೆಚ್ಚು ಸ್ಥಳೀಯರು ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.





