ಕಾಸರಗೋಡಿನ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ: ಸುದ್ದಿ ತಿಳಿದ ಬೆನ್ನಲ್ಲೇ ಅದೇ ಹಾದಿ ಹಿಡಿದ ಭಾವೀ ಪತಿ

ಕರ್ನಾಟಕದ ಬ್ಯಾಂಕ್ ಒಂದರಲ್ಲಿ ಉದ್ಯೋಗಿಯಾಗಿದ್ದ ಕಾಸರಗೋಡಿನ ಯುವತಿ ತಮ್ಮ ವಾಸ್ತವ್ಯದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಬೆನ್ನಲ್ಲೇ, ಅವರ ಭಾವಿ ಪತಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು ಕಣ್ಣೂರಿನ ಅಂಬಲತ್ತಟ್ಟು ಮೂಲದ ವಿ. ಅಮಲ್ ಎಂದು ಗುರುತಿಸಲಾಗಿದೆ. ಎರ್ನಾಕುಲಂನಲ್ಲಿ ಕೆಲಸ ಮಾಡುತ್ತಿದ್ದ ಈ ಯುವಕ, ಅಲ್ಲಿನ ಹೋಟೆಲ್ ಒಂದರ ಕೊಠಡಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಇಬ್ಬರೂ ವಿಡಿಯೋ ಕರೆ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಕಾಸರಗೋಡಿನ ಪೂಚಕ್ಕಾಡ್ ಕಿಳಕ್ಕೇಕರ ತಯ್ಯಿಲ್ ಮನೆಯ ಚಂದ್ರನ್ ಅವರ ಪುತ್ರಿ ಪಿ. ಅನುಶ್ರೀ (24) ಮೃತಪಟ್ಟ ಬೆನ್ನಲ್ಲೇ ಅಮಲ್ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಅನುಶ್ರೀ ಕರ್ನಾಟಕದ ಎಸ್‌ಬಿಐ (SBI) ಹುಣಸೂರು ಶಾಖೆಯಲ್ಲಿ ಉದ್ಯೋಗಿಯಾಗಿದ್ದರು. ಮುಂಬರುವ ಡಿಸೆಂಬರ್ 26 ರಂದು ಇವರಿಬ್ಬರ ವಿವಾಹ ನಿಶ್ಚಯವಾಗಿತ್ತು. ಮದುವೆ ಹತ್ತಿರವಾಗುತ್ತಿರುವಾಗಲೇ ಇಬ್ಬರ ಈ ದಾರುಣ ಅಂತ್ಯ ಸಂಭವಿಸಿದೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಯುವತಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲವಾಗಿದ್ದು, ಘಟನೆ ಕುರಿತು ಸಮಗ್ರ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading