



ದೆಹಲಿ: ಇಲ್ಲಿನ ಪ್ರಮುಖ ರೈಲ್ವೇ ಸ್ಟೇಷನ್‌ನಲ್ಲಿ ಭಾನುವಾರ ತೀವ್ರ ಹೈಡ್ರಾಮಾವೊಂದು ನಡೆದಿದ್ದು, ಪ್ರಿಯಕರನೊಂದಿಗೆ ತೆರಳಲು ಸಿದ್ಧರಾಗಿದ್ದ ಯುವತಿಯೊಬ್ಬಳು ತಂದೆಯ ಭಾವುಕ ಮನವಿಗೆ ಕರಗಿ ಕೊನೆಕ್ಷಣದಲ್ಲಿ ಮನೆಗೆ ಮರಳಿದ ಘಟನೆ ನಡೆದಿದೆ.
ಯುವತಿಯು ತನ್ನ ಪ್ರಿಯಕರನೊಂದಿಗೆ ಬೇರೆ ನಗರಕ್ಕೆ ತೆರಳಲು ರೈಲ್ವೇ ಸ್ಟೇಷನ್‌ಗೆ ಆಗಮಿಸಿ ರೈಲಿಗಾಗಿ ಕಾಯುತ್ತಿದ್ದಳು. ವಿಷಯ ತಿಳಿದ ಯುವತಿಯ ತಂದೆ ಹಾಗೂ ಕುಟುಂಬಸ್ಥರು ತಕ್ಷಣವೇ ರೈಲ್ವೇ ಸ್ಟೇಷನ್‌ಗೆ ಧಾವಿಸಿ ಆಕೆಯನ್ನು ಪತ್ತೆಹಚ್ಚಿ ತಡೆಯಲು ಯತ್ನಿಸಿದ್ದಾರೆ.
ಪ್ಲಾಟ್‌ಫಾರ್ಮ್‌ನಲ್ಲೇ ಯುವತಿ ಮತ್ತು ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ತಂದೆಯು ಮಗಳ ಮುಂದೆ ಕಣ್ಣೀರಿಡುತ್ತಾ ಮನೆಗೆ ಮರಳುವಂತೆ ಭಾವುಕರಾಗಿ ಬೇಡಿಕೊಂಡಿದ್ದಾರೆ.
ತಂದೆಯ ಕಣ್ಣೀರು ಮತ್ತು ಕುಟುಂಬದ ಪ್ರೀತಿಯನ್ನು ಕಂಡು ಮನಪರಿವರ್ತನೆಯಾದ ಯುವತಿಯು, ಪ್ರಿಯಕರನ ಜತೆ ತೆರಳುವ ನಿರ್ಧಾರವನ್ನು ಕೈಬಿಟ್ಟು ತಂದೆಯೊಂದಿಗೆ ಮನೆಗೆ ಮರಳಲು ಒಪ್ಪಿಕೊಂಡಳು. ರೈಲ್ವೇ ಸ್ಟೇಷನ್‌ನಲ್ಲಿ ನೆರೆದಿದ್ದ ಪ್ರಯಾಣಿಕರ ಸಮ್ಮುಖದಲ್ಲೇ ಈ ಹೈಡ್ರಾಮಾ ಸುಖಾಂತ್ಯ ಕಂಡಿದೆ.



