ಎಸ್ ವೈ ಎಸ್ ಸುಳ್ಯ ಝೋನ್ ವತಿಯಿಂದ ನಿಶಾನಾ ಸಾವಿನ ಸಮಗ್ರ ತನಿಖೆಗೆ ಒತ್ತಾಯ ಮತ್ತು ಜಂತರ್ ಮಂತರ್ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಕ್ಕೆ ಖಂಡನೆ

ಕಲ್ಲುಗುಂಡಿಯ ಕಡೆಪಾಲ ಆಲಿ ಗುಡ್ಡೆಯಲ್ಲಿ ನಡೆದ ಫಾತಿಮತ್ ನಿಶಾನ ಅನುಮಾನಾಸ್ಪದ ಸಾವು ಪ್ರಕರಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆ ವಿಧಿಸಿ,ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವ ಮೂಲಕ ಜನಸಾಮಾನ್ಯರಲ್ಲಿನ ಗೊಂದಲಕ್ಕೆ ತೆರೆ ಎಳೆಯಲು ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಸುಳ್ಯ ಝೋನ್ ಆಗ್ರಹ ಪಡಿಸುತ್ತದೆ
ಪ್ರಸ್ತುತ ಘಟನೆಯು ಕಳವಳಕಾರಿಯಾಗಿದ್ದು,ಇಂತಹ ದುರ್ಘಟನೆಗಳು ಮರುಕಳಿಸದಂತೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕಾಗಿದೆ
ಹೆಣ್ಣು ಮಕ್ಕಳು ಅಮೂಲ್ಯ ಸಂಪತ್ತು ಅವರ ಪಾಲನೆ ಪೋಷಣೆ ಮತ್ತು ರಕ್ಷಣೆ ಸರ್ವರ ಪಾಲಿನ ಕರ್ತವ್ಯ
ಯಾವುದೇ ಸಂದಿಗ್ಧ ಸ್ಥಿತಿಯಲ್ಲಿ ದುಡುಕಿನ ನಿರ್ಧಾರ ಕೈಗೊಂಡು ಸ್ವಹತ್ಯೆ ಅಥವಾ ಇನ್ನೊಬ್ಬರನ್ನು ಮುಗಿಸುವ ಕುತಂತ್ರಕ್ಕೆ ಬಲಿಯಾಗದೇ ಮಾತುಕತೆಗಳ ಮೂಲಕ ಅಥವಾ ಕಾನೂನು ಪಾಲನೆಯ ಪರಿಹಾರ ಮಾರ್ಗೋಪಾಯಗಳನ್ನು ಅನುಸರಿಸಬೇಕು.
ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಕೊಲೆಗಳು ರಾಜಾರೋಷವಾಗಿ ನಡೆಯುತ್ತಿದೆ
ಬಿ ಸಿ ರೋಡ್ ನಲ್ಲಿ ನಡೆದ ಘಟನೆ ಇದಕ್ಕೊಂದು ಉದಾಹರಣೆ ಮಾತ್ರ
ತಪ್ಪಿತಸ್ಥರಿಗೆ ಅರ್ಹವಾದ ಶಿಕ್ಷೆ ದೊರಕದಿರುವುದು ಇಂತಹ ನಿರಂತರ ಅನಾಹುತಗಳಿಗೆ ಕಾರಣವಾಗಬಹುದು.
ದೇಶದ ರಾಜಧಾನಿ ದಿಲ್ಲಿಯ ಜಂತರ್ ಮಂತರ್ ನಲ್ಲಿ ನ್ಯಾಯಕ್ಕಾಗಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಪಡೆದ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸುತ್ತದೆ ಪ್ರತಿಭಟನೆ ಸಂವಿಧಾನ ಬದ್ಧ ಹಕ್ಕು ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಬೇಕಾದದ್ದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯ ಈ ನಿಟ್ಟಿನಲ್ಲಿ
ಸರ್ವರಿಗೂ ನ್ಯಾಯ ಒದಗಿಸಬೇಕೆಂದು ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಸುಳ್ಯ ಝೋನ್ ಸಂಘಟನೆ ಸರ್ಕಾರವನ್ನು,ಸಂಬಂಧಪಟ್ಟ ಅಧಿಕಾರಿಗಳನ್ನು ಪತ್ರಿಕಾ ವರದಿ ಮೂಲಕ ಆಗ್ರಹಪಡಿಸುತ್ತಿದೆ

Leave a Reply

Discover more from

Subscribe now to keep reading and get access to the full archive.

Continue reading