ಕಲ್ಲುಗುಂಡಿಯಲ್ಲಿ ಮೂರು ದಿನಗಳ ಹಿಂದೆ ನಡೆದ ನಿಶಾನಾ ಎಂಬ ವಿವಾಹಿತ ಯುವತಿಯ ಅನುಮನಾಸ್ಪದ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು ಎರಡು ದಿನಗಳ ಹಿಂದೆ ಅತ್ತೆ ಮಾವ ಮತ್ತು ನಾದಿನಿಯನ್ನು ಪೋಲೀಸರು ಕರೆದೊಯ್ದು ನಂತರ ವಿಚಾರಣೆ ನಡೆಸಿ ಬಿಡುಗಡೆ ಗೊಳಿಸಿದ್ದು ಜನರಲ್ಲಿ ಆಕ್ರೋಶಕ್ಕೆ ಕಾರಣ ಆಗಿತ್ತು. ಇದೀಗ ಮತ್ತೆ ಬುಧವಾರ ಅಂದರೆ ಈ ದಿನ ಪೋಲೀಸರು ಆರೋಪಿಗಳನ್ನು ಕರೆದೊಯ್ದಿರುವುದಾಗಿ ಮಾಹಿತಿ ಲಭ್ಯ ಆಗಿದೆ. ಈ ನಡುವೆ ಯುವತಿ ಕಡೆಯವರು ಯುವತಿಯ ಮಗುವಿನ ವಿಡಿಯೋ ಒಂದನ್ನು ಕಳುಹಿಸಿದ್ದು ಅತ್ತೆ ಮಾವ ಮತ್ತು ನಾದಿನ ಹಿಂಸಿರುವುದಕ್ಕೆ ಇದು ಪುರಾವೆ ಎನ್ನಲಾಗುತ್ತಿದೆ.
ಈ ವಿಡಿಯೋ ಲಿಂಕ್ ಕೆಳಗಡೆ ಕೊಟ್ಟಿದ್ದು ನಿಶಾನಾ ಳ ಸಾವಿಗೆ ನ್ಯಾಯ ದೊರೆಯಬೇಕೆಂಬುದಷ್ಟೇ ಸಾಕಾರ ನ್ಯೂಸ್ ಕಳಕಳಿಯಾಗಿದೆ.

