ಮಮ್ಮೂಟಿಗೆ ದಾಖಲೆಯ ನಾಲ್ಕನೇ ಬಾರಿ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ

ಮಹಾನಟ ಮಮ್ಮೂಟಿ ಅವರು ನಾಲ್ಕನೇ ಬಾರಿ ಅತ್ಯುತ್ತಮ‌ ನಟ ರಾಷ್ಟ್ರೀಯ ಪ್ರಶಸ್ತಿ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಭ್ರಮಯುಗಮ್ ಚಿತ್ರದ ತನ್ನ ಮಹೋನ್ನತ ಅಭಿನಯದ ಕಾರಣಕ್ಕೆ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಮಲಯಾಳಮ್ ಚಿತ್ರರಂಗದ ಮೆಗಾಸ್ಟಾರ್ ಇದೀಗ ರಾಷ್ಟ್ರ ಪ್ರಶಸ್ತಿಯನ್ನೂ ಕಾರ್ತಿಕ್ ಆರ್ಯನ್ ಜತೆ ಸೇರಿ  ಮುಡಿಗೇರಿಸಿಕೊಂಡಿದ್ದು, ತಮ್ಮ ನಟನಾ ಚಾತುರ್ಯದಿಂದ  ಐದು ದಶಕಗಳ ಕಾಲ ನಿರಂತರ ಬೆರಗುಗೊಳಿಸುತ್ತಲೇ ಬಂದ ಎಪ್ಪತ್ತನಾಲ್ಕರ ಹರೆಯದ ನಟ ಇದೀಗ ನ್ಯೂ ಜನರೇಷನ್ ನಟರಿಗೂ ಸವಾಲೊಡ್ಡುವ ಮೂಲಕ ತಾನೊಬ್ಬ  ಲಿಜೆಂಡ್ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದ್ದಾರೆ.

ನಿಮ್ಮದೊಂದು ಉತ್ತರ