ಹಿತಾ ಗೋಳ್ಯಾಡಿ ಸಾಧನೆ: ನೀಟ್ ಪರೀಕ್ಷೆಯಲ್ಲಿ 631 ಅಂಕ ಗಳಿಸಿ ಸಾಧನೆಯ ಶಿಖರಕ್ಕೇರಿದ ಪ್ರತಿಭೆ!


ಸುಳ್ಯ: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ (NEET-2026) ಸುಳ್ಯದ ಹೆಮ್ಮೆಯ ಪ್ರತಿಭೆ ಹಿತಾ ಗೋಳ್ಯಾಡಿ ಅವರು 720 ಅಂಕಗಳಿಗೆ ಭರ್ಜರಿ 631 ಅಂಕಗಳನ್ನು ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಈ ಹಿಂದೆ ನಡೆದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ (PUC Science) ವಾರ್ಷಿಕ ಪರೀಕ್ಷೆಯಲ್ಲೂ 590 ಅಂಕಗಳನ್ನು ಗಳಿಸಿದ್ದ ಹಿತಾ, ರಾಜ್ಯಕ್ಕೇ 10ನೇ ರಾಂಕ್ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದರು. ಇದೀಗ ನೀಟ್ ಪರೀಕ್ಷೆಯಲ್ಲೂ ತಮ್ಮ ನಿರಂತರ ಪರಿಶ್ರಮ ಹಾಗೂ ಪ್ರತಿಭೆಯನ್ನು ಸಾಬೀತುಪಡಿಸಿ, ವೈದ್ಯಕೀಯ ಶಿಕ್ಷಣದ ಕನಸಿನತ್ತ ಮುನ್ನಡೆದಿದ್ದಾರೆ.
ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ವಸಂತಮಾಲ ಮತ್ತು ದಿನೇಶ ಗೊಳ್ಯಾಡಿ ಅವರ ಮಗಳಾದ ಹಿತಾ ಅವರ ನಿರಂತರ ಅಧ್ಯಯನ ಮತ್ತು ಶಿಸ್ತುಬದ್ಧ ಸಿದ್ಧತೆಯೇ ಇವರ ಈ ಸರಣಿ ಸಾಧನೆಗೆ ಕಾರಣವಾಗಿದ್ದು, ಹಿತಾ ಗೋಳ್ಯಾಡಿ ಅವರ ಈ ಮಹೋನ್ನತ ಸಾಧನೆಗೆ ವ್ಯಾಪಕ ಪ್ರಶಂಸೆ ಹಾಗೂ ಅಭಿನಂದನೆಗಳು ಹರಿದುಬರುತ್ತಿವೆ.

Leave a Reply

Discover more from

Subscribe now to keep reading and get access to the full archive.

Continue reading