ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘ, ಪುತ್ತೂರು ವಾರ್ಷಿಕ ಮಹಾಸಭೆವಾರ್ಷಿಕ ವ್ಯವಹಾರ ರೂ. 37.83 ಕೋಟಿ, 1.17 ಕೋಟಿ ವ್ಯಾಪಾರ ಲಾಭ, ನಿವ್ವಳ ಲಾಭ 20.92 ಲಕ್ಷ. ಶೇಕಡಾ 22% ಡಿವಿಡೆಂಡ್, ಸದಸ್ಯರುಗಳಿಗೆ ಕೆ.ಜಿ 1 ರಂತೆ ರೂ.11 ಬೋನಸ್ ವಿತರಣೆ

ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘದ 88ನೇ ವಾರ್ಷಿಕ ಮಹಾಸಭೆ ಶ್ರೀಯುತ. ಚಂದ್ರ ಕೋಲ್ಟಾರ್ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 15-07-2026ರ ಬುಧವಾರ ಪೂರ್ವಾಹ್ನ ಗಂಟೆ 11.00ಕ್ಕೆ ಪುತ್ತೂರಿನ ಪ್ರಧಾನ ಕಛೇರಿಯ ಮಾಧುರಿ ಸೌಧ ಸಭಾಂಗಣದಲ್ಲಿ ಜರಗಿತು.

ವಾರ್ಷಿಕ ವ್ಯವಹಾರ 3.19 ಕೋಟಿ ಆಗಿದ್ದು, 1.09 ಲಕ್ಷ ಕೆ.ಜಿ ಜೇನು ಮಾರಾಟ ಮಾಡಲಾಗಿದ್ದು, ರೂ.1.17 ಕೋಟಿ ವ್ಯಾಪಾರ ಲಾಭಗಳಿಸಲಾಗಿದೆ. ರೂ.20.92 ಲಕ್ಷ ನಿವ್ವಳ ಲಾಭ ಬಂದಿದ್ದು, ಒಟ್ಟು ವಾರ್ಷಿಕ ವ್ಯವಹಾರ ರೂ.37.83 ಕೋಟಿ ಆಗಿರುತ್ತದೆ. ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರುಗಳಿಗೆ ಶೇಕಡಾ 22 ಡಿವಿಡೆಂಟ್ ಘೋಷಿಸಲಾಗಿದ್ದು, ಜೇನು ವ್ಯವಯಸಾಯಗಾರರಿಗೆ ಕೆ.ಜಿ 1 ರಂತೆ ರೂ.11 ಬೋನಸ್ ನೀಡಲಾಗುವುದು ಎಂದು ಅಧ್ಯಕ್ಷರು ಘೋಷಣೆ ಮಾಡಿದರು.

ಸಂಘಕ್ಕೆ ಅತಿ ಹೆಚ್ಚು ಜೇನು ನೀಡಿದ 10 ಜನ ಜೇನು ವ್ಯವಸಾಯಗಾರರಿಗೆ ಹಾಗೂ ಅತೀ ಹೆಚ್ಚು ಜೇನು ಖರೀದಿಸಿ ಮಾರಾಟ ಮಾಡಿದ ಮಾರಾಟಗಾರರಿಗೆ ಬಹುಮಾನ ಕೊಟ್ಟು ಗೌರವಿಸಲಾಯಿತು.

ಮುಂದಿನ ಆರ್ಥಿಕ ವರ್ಷದಲ್ಲಿ ಜೇನಿನ ಪ್ರದರ್ಶನ ಹಾಗೂ ಮಾರಾಟ ಮಾಡಲು ಲಘು ವಾಹನ ಖರೀದಿಸಲಾಗುವುದು. ಇದರೊಂದಿಗೆ ಜೇನು ಚಾಕೋಲೇಟ್‌ನ ಮಾರಾಟವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಜೇನಿನ ಉತ್ಪನ್ನವಾದ Honey Bite Chocolate ಹಾಗೂ Honey pepper Bite Chocolate ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬಿಡಲಾಗುವುದು. ಸಕ್ಕರೆ ರಹಿತ ಚಾಕೋಲೇಟ್ ಮತ್ತು ಹನಿ ಸೋಪು, ಜೇನಿನ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬಿಡಲಾಗುವುದು.

ಮಹಾಸಭೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ಹಿರಿಯ ವಿಜ್ಞಾನಿಗಳಾದ ಡಾ. ಟಿ.ಜೆ ರಮೇಶ್ ಹಾಗೂ ಡಾ. ಮಲ್ಲಿಕಾರ್ಜುನ ಎಲ್. ಇವರು ಮಣ್ಣಿನ ಫಲವತ್ತತೆ ಹಾಗೂ ನೀರು ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಅಧ್ಯಕ್ಷರಾದ ಚಂದ್ರ ಕೊಲ್ಚಾರ್, ಉಪಾಧ್ಯಕ್ಷರಾದ ರಾಜಾರಾಮ ಶೆಟ್ಟಿ, ನಿರ್ದೇಶಕರುಗಳಾದ ಜಿ.ಪಿ ಶ್ಯಾಮ ಭಟ್, ಜನಾರ್ಧನ ಚೂಂತಾರು, ಡಿ. ತನಿಯಪ್ಪ, ಶ್ರೀಶ ಕೊಡವೂರು, ಶ್ರೀಮತಿ ಇಂದಿರಾ ಕೆ. ಶ್ರೀ ಹರೀಶ್ ಕೋಡ್ಲ, ಪಾಂಡುರಂಗ ಹೆಗ್ಡೆ, ಪುರುಷೋತ್ತಮ ಭಟ್ ಎಂ. ಶಿವಾನಂದ, ಮನಮೋಹನ ಎ. ಪುಟ್ಟಣ್ಣ ಗೌಡ ಕೆ, ಶಂಕರ್ ಪೆರಾಜೆ, ಶ್ರೀಮತಿ ಸರಸ್ವತಿ ವೈ ಪಿ, ಶ್ರೀಮತಿ ಸುಶೀಲ ಹಾಗೂ ವ್ಯವಸ್ಥಾಪನಾ ನಿರ್ದೇಶಕರಾದ ಜಯಾನಂದ ಜಿ ಉಪಸ್ಥಿತರಿದ್ದರು.

Leave a Reply

Discover more from

Subscribe now to keep reading and get access to the full archive.

Continue reading