ಸುಳ್ಯದಲ್ಲಿ SYS ಸುಳ್ಯ ಝೋನ್ ಆಶ್ರಯದಲ್ಲಿ SYS ಸುಳ್ಯ ಝೋನ್ ಸಾಂತ್ವನ ಕೇಂದ್ರದ ಲೋಕಾರ್ಪಣಾ ಸಮಾರಂಭವು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು 2026ರ ಜುಲೈ 19ರಂದು ಆದಿತ್ಯವಾರ ಗಾಂಧಿನಗರದ ಅನ್ಸಾರ್ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.
ಮಧ್ಯಾಹ್ನ 3:00 ಗಂಟೆಗೆ ಬದರ್ ಮೌಲಿದ್ ಪಾರಾಯಣ ಹಾಗೂ ನಮ್ಮನ್ನಗಲಿದವರಿಗಾಗಿ ತಹ್ಲೀಲ್ ದುಆ ಮಜ್ಲಿಸ್ ಕಾರ್ಯಕ್ರಮ ಆಯೋಜಿಸಲಾಗಿದೆ. ತದನಂತರ ಸಂಜೆ 4:45 ಕ್ಕೆ ಸಾಂತ್ವನ ಕೇಂದ್ರದ ಅಧಿಕೃತ ಲೋಕಾರ್ಪಣೆ ನೆರವೇರಲಿದೆ.
ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸಾಂತ್ವನ ಕೇಂದ್ರದ ಯಶಸ್ಸಿಗೆ ಸಾರ್ವಜನಿಕರ ಕೊಡುಗೆ ಅಮೂಲ್ಯವಾಗಿದ್ದು, ಎಲ್ಲರೂ ಸಹಕರಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ. ಕಾರ್ಯಕ್ರಮಕ್ಕೆ ಸಾರ್ವಜನಿಕರೆಲ್ಲರಿಗೂ ಆದರದ ಸ್ವಾಗತವನ್ನು ಕೋರಲಾಗಿದೆ.











