ಸುಳ್ಯ ತಾಲೂಕು ಆಂಬುಲನ್ಸ್ ಚಾಲಕ ಮಾಲಕರ ಸಂಘದ ಮಹಾಸಭೆ: ನೂತನ ಪದಾಧಿಕಾರಿಗಳ ನೇಮಕ

ಸುಳ್ಯ ತಾಲೂಕು ಆಂಬ್ಯುಲೆನ್ಸ್ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆಯು ನಾವೂರಿನ ವೈಲೆನ್ಸಿಯ ಕಟ್ಟಡದಲ್ಲಿ ಸಂಘದ ಅಧ್ಯಕ್ಷ ಶರತ್ ಅರಂತೋಡು ಅವರ ಅಧ್ಯಕ್ಷತೆಯಲ್ಲಿ ಜುಲೈ 11 ರಂದು ನಡೆಯಿತು.
ಈ ಸಭೆಯಲ್ಲಿ ಮುಂದಿನ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಸರ್ವಾನುಮತದಿಂದ ಮಾಡಲಾಯಿತು.
ನೂತನ ಗೌರವಾಧ್ಯಕ್ಷರಾಗಿ ಶಿವ ಸುಳ್ಯ ಹಾಗೂ ಅಧ್ಯಕ್ಷರಾಗಿ ಕೇಶವಚಂದ್ರ ಭಟ್ ಬೆಳ್ಳಾರೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಫೀಕ್ ಬಿ.ಎಮ್.ಎ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಗೂನಡ್ಕ, ಜತೆ ಕಾರ್ಯದರ್ಶಿಯಾಗಿ ರಫೀಕ್ ಲೈಫ್ ಕೇರ್ ಮತ್ತು ಕೋಶಾಧಿಕಾರಿಯಾಗಿ ತಾಜುದ್ದೀನ್ ಟರ್ಲಿ ಅವರನ್ನು ಆರಿಸಲಾಯಿತು.
ಉಳಿದಂತೆ ಕಾನೂನು ಸಲಹೆಗಾರರಾಗಿ ಅನೂಪ್ ಪಿ.ಆರ್ ಬೆಳ್ಳಾರೆ, ಸಂಘಟನಾ ಕಾರ್ಯದರ್ಶಿಯಾಗಿ ಮಿಥುನ್ ಸುಳ್ಯ, ಸಂಘಟನಾ ಜತೆ ಕಾರ್ಯದರ್ಶಿಯಾಗಿ ಸಮೀರ್ ಕಾಣಿಯೂರು, ಮೀಡಿಯಾ ಕಾರ್ಯದರ್ಶಿಯಾಗಿ ಪುನೀತ್ ಸಂಕೇಶ, ಮೀಡಿಯಾ ಜತೆ ಕಾರ್ಯದರ್ಶಿಯಾಗಿ ಪ್ರಶಾಂತ್ ಜಯನಗರ ಹಾಗೂ ರೆಸ್ಕ್ಯೂ ಕಾರ್ಯದರ್ಶಿಯಾಗಿ ಹನೀಫ್ ಜಯನಗರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನೂತನ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Discover more from

Subscribe now to keep reading and get access to the full archive.

Continue reading