ಶಾಂತಿನಗರ: ಜುಲೈ 12 ರಂದು ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ಅನುಸ್ಮರಣಾ ಕಾರ್ಯಕ್ರಮ


ಸುಳ್ಯ: ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ (ರಿ) ಶಾಂತಿನಗರ, ಸುಳ್ಯ ಇದರ ವತಿಯಿಂದ ಸೆಯ್ಯಿದ್ ಮಶ್ಹೂದ್ ಕೂರತ್ ತಂಗಳ್ ರವರ ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ಕೂರತ್ ತಂಙಳ್ ಅನುಸ್ಮರಣಾ ಕಾರ್ಯಕ್ರಮವು ಜುಲೈ 12 ರ ಆದಿತ್ಯವಾರ ಶಾಂತಿನಗರದ ನೂರುಲ್ ಇಸ್ಲಾಂ ಮದ್ರಸ ವಠಾರದಲ್ಲಿ ಜರುಗಲಿದೆ.
ಅಂದು ಸಂಜೆ ಮಗ್ರಿಬ್ ನಮಾಜ್‌ನ ಬಳಿಕ ಕಾರ್ಯಕ್ರಮವು ಆರಂಭಗೊಳ್ಳಲಿದ್ದು, ಇಸ್ಲಾಮಿಕ ರಂಗದ ಪ್ರಮುಖ ಉಲಮಾಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸೆಯ್ಯಿದ್ ಮಶ್ಹೂದ್ ಕೂರತ್ ತಂಗಳ್ ರವರು ಆಧ್ಯಾತ್ಮಿಕ ಮಾರ್ಗದರ್ಶನ ನೀಡಲಿದ್ದಾರೆ. ಬಹು ಮುಬಶ್ಶಿರ್ ಅಹ್ಸನಿ ಅಲ್ ಕಾಮಿಲಿ ಕೊಂಡಂಗೇರಿ ಅವರು ದುವಾ ನೇತೃತ್ವ ಹಾಗೂ ಮುಖ್ಯ ಪ್ರಭಾಷಣ ನಡೆಸಿಕೊಡಲಿದ್ದಾರೆ. ಸ್ವಲಾತ್ ನೇತೃತ್ವವನ್ನು ಬಹು ಉಸ್ತಾದ್ ಅಹ್ಮದ್ ಶಮೀರ್ ನಈಮಿ ಪೈಚಾರ್ ವಹಿಸಲಿದ್ದು, ಬಹು ಉಸ್ತಾದ್ ಅಬ್ದುರ್ರಶೀದ್ ಝೖನಿ ಪೆರಾಜೆ ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶದ ವ್ಯವಸ್ಥೆಯನ್ನು ಮಾಡಲಾಗಿದ್ದು, ಕೊನೆಯಲ್ಲಿ ತಬರ್ರುಕ್ ವಿತರಣೆ ಇರಲಿದೆ. ಸಾರ್ವಜನಿಕರು ಹಾಗೂ ಧರ್ಮಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಪದಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading