ಜುಲೈ 12 ರಂದು ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ನಲ್ಲಿ 14 ನೇ ಆವೃತ್ತಿಯ ಸುಳ್ಯ ಸೆಕ್ಟರ್ ಸಾಹಿತ್ಯೋತ್ಸವ

ಸುಳ್ಯ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF) ಸುಳ್ಯ ಸೆಕ್ಟರ್ ವತಿಯಿಂದ 14ನೇ ಆವೃತ್ತಿಯ ಸಾಹಿತ್ಯೋತ್ಸವವು “ನಿರೀಕ್ಷೆಗಳ ನೀಲನಕ್ಷೆ” ಎಂಬ ಧ್ಯೇಯವಾಕ್ಯದೊಂದಿಗೆ ಜುಲೈ 12ರಂದು (ಭಾನುವಾರ) ಅನ್ಸಾರಿಯ ಗಲ್ಫ್ ಆಡಿಟೋರಿಯಂನಲ್ಲಿ ನಡೆಯಲಿದೆ.

ಸುಳ್ಯ ಸೆಕ್ಟರ್‌ ಅಧೀನದ ಏಳು ಯುನಿಟ್‌ಗಳ ಸುಮಾರು 200ಕ್ಕೂ ಅಧಿಕ ಸ್ಪರ್ಧಾರ್ಥಿಗಳು ಈ ಸಾಹಿತ್ಯೋತ್ಸವದಲ್ಲಿ ಭಾಗವಹಿಸಲಿದ್ದು, ವಿವಿಧ ವಿಭಾಗಗಳಲ್ಲಿ ನೂರಾರು ಸ್ಪರ್ಧೆಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಹಲವಾರು ಉಲಮಾಗಳು, ಉಮರಾಗಳು, ಸಯ್ಯಿದ್‌ಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.

ಈ ಕುರಿತು ಪತ್ರಿಕೆಯಲ್ಲಿ ಪ್ರಕಟಣೆ ನೀಡಿರುವ ಸೆಕ್ಟರ್ ಸಮಿತಿಯ ಅಧ್ಯಕ್ಷರಾದ ನಾಸಿರ್ ಎಲಿಮಲೆ ಹಾಗೂ ಸಾಹಿತ್ಯೋತ್ಸವ ಸಮಿತಿಯ ಚೆರ್ಮ್ಯಾನ್ ಆಬಿದ್ ಕಲ್ಲುಮುಟ್ಲು, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading