ಸುಳ್ಯ: ಇಲ್ಲಿನ ಆಂಬುಲನ್ಸ್ ಸ್ಟಾಂಡ್ ಬಳಿ ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು. ಟಿ. ಖಾದರ್ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಸುಳ್ಯದ ಆಂಬುಲನ್ಸ್ ಸಂಘಟನೆಯ ಪದಾಧಿಕಾರಿಗಳು ಹಾಗೂ ಪ್ರಮುಖರು ಒಟ್ಟಾಗಿ ಸಚಿವರನ್ನು ಆಂಬುಲನ್ಸ್ ಸ್ಟಾಂಡಿಗೆ ಕರೆದು ಸನ್ಮಾನಿಸಿದರು. ಸಾರ್ವಜನಿಕ ಸೇವೆಗೆ ಶ್ರಮಿಸುತ್ತಿರುವ ಆಂಬುಲನ್ಸ್ ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ಶ್ಲಾಘಿಸಿ ಸಚಿವರು ಗೌರವ ಸ್ವೀಕರಿಸಿದರು.ಇದೇ ಸಂದರ್ಭದಲ್ಲಿ, ಅಹೋರಾತ್ರಿ ತುರ್ತು ಪರಿಸ್ಥಿತಿಗಳಲ್ಲಿ ಜೀವ ರಕ್ಷಣೆಯ ಮಹತ್ಕಾರ್ಯದಲ್ಲಿ ತೊಡಗಿರುವ ಕರ್ನಾಟಕ ರಾಜ್ಯದ ಖಾಸಗಿ ಆಂಬುಲನ್ಸ್ ಚಾಲಕರು ಮತ್ತು ಮಾಲಕರಿಗೆ ಸರಕಾರದ ವತಿಯಿಂದ ವಿಶೇಷ ಸವಲತ್ತುಗಳು ಹಾಗೂ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಸಚಿವರಿಗೆ ಅಧಿಕೃತವಾಗಿ ಮನವಿ ಸಲ್ಲಿಸಲಾಯಿತು.
ಮನವಿಯನ್ನು ಸ್ವೀಕರಿಸಿದ ಸಚಿವರು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷರಾದ ಶಿವಪ್ರಸಾದ್, ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ, ಕೋಶಾಧಿಕಾರಿ ರಫೀಕ್ BMA, ಪ್ರಮುಖರಾದ ತಾಜುದ್ದೀನ್ ಟರ್ಲಿ, ರಫೀಕ್ ಲೈಫ್ ಕೇರ್, ಹಮೀದ್ ಬೆಳ್ಳಾರೆ, ಮಿಥುನ್, ಹನೀಫ್ KVG, ಸಂದೇಶ್, ಸಿದ್ದೀಕ್ ಜಟ್ಟಿಪಳ್ಳ, ಸಮೀರ್ ಕಾಣಿಯೂರು ಹಾಗೂ ಪೃಥ್ವಿರಾಜ್ ಬೆಳ್ಳಾರೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.






