ಸಚಿವ ಯು.ಟಿ ಖಾದರ್ ಅವರಿಗೆ ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಸಂಪಾಜೆ ಗೇಟ್ ಬಳಿ ಅದ್ದೂರಿ ಸ್ವಾಗತ .

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಯೂ.ಟಿ ಖಾದರ್ ಅವರು ಮಡಿಕೇರಿ ಕಡೆಯಿಂದ ಸುಳ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುವ ಸಂದರ್ಭದಲ್ಲಿ ಸಂಪಾಜೆ ಗೇಟ್ ಬಳಿ ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಅದ್ದೂರಿ ಸ್ವಾಗತ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ಎ.ಕೆ.ಇಬ್ರಾಹಿಂ,ಜಿಲ್ಲಾ ಅಸಂಘಟಿತ ಕಾರ್ಮಿಕರ ಪ್ರದಾನ ಕಾರ್ಯದರ್ಶಿ ಹಾಗೂ ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ರಾಜು (ಜ್ಞಾನಶೀಲನ್ ವಿ)ನೆಲ್ಲಿಕುಮೇರಿ, ಸಂಪಾಜೆ ವಲಯ ಕಾಂಗ್ರೆಸ್ ಪ್ರಭಾರ ಅಧ್ಯಕ್ಷರಾದ ಶ್ರೀ ವಸಂತ ಪೆಲ್ತಡ್ಕ ,ಪ್ರದಾನ ಕಾರ್ಯದರ್ಶಿ ಲೂಕಾಸ್. ಟಿ.ಐ ,ಸಂಪಾಜೆ ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಲನ‌ .ಕೆ.ಆರ್. ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಪ್ರಮಿಳಾ ಪೆಲ್ತಡ್ಕ ,ಮಾಜೀ ಗ್ರಾಮ ಪಂಚಾಯತ್ ಸದಸ್ಯರಾದ ಬೆಂಜಮೀನ್ ಡಿಸೋಜ, ಕೃಷಿ ಪತ್ತಿನ ಸಹಕಾರಿ ಸಂಘದ ಮಾಜೀ ನಿರ್ದೇಶಕರಾದ ಹಾಜಿ ಹೆಚ್ ಹಮೀದ್,ಉಮೇಶ್ ಸಂಪಾಜೆ ಮತ್ತಿತರರು ಉಪಸ್ತಿತರಿದ್ದರು.

Leave a Reply

Discover more from

Subscribe now to keep reading and get access to the full archive.

Continue reading