ದ.ಕ ಒಕ್ಕಲಿಗರನ್ನು ಅವಮಾನಿಸಿದ ಹಿನ್ನೆಲೆಯಲ್ಲಿ ಸ್ವಜಾತಿ ನಾಯಕನ ವಿರುದ್ಧ ಸುಳ್ಯ ಒಕ್ಕಲಿಗರಿಂದ ಕ್ಷಮೆಯಾಚನೆಗೆ ಆಗ್ರಹ ಎಚ್ಚರಿಕೆ.

ಸುಳ್ಯ: ಇತ್ತೀಚೆಗೆ ಕೇಂದ್ರ ಮಾಜಿ ಸಚಿವ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡರ ಕುರಿತಾಗಿ ರಾಜಕೀಯ ವಿಚಾರವಾಗಿ ಮಾತನಾಡುವ ಭರದಲ್ಲಿ ರಾಜ್ಯದ ಒಕ್ಕಲಿಗ ನಾಯಕ ಹಾಗೂ ಶಾಸಕ ಎಸ್ ಆರ್ ವಿಶ್ವನಾಥ್ ಹೇಳಿಕೆಗೆ ಸುಳ್ಯ ಒಕ್ಕಲಿಗ ನಾಯಕರು ಅಕ್ರೋಶ ವ್ಯಕ್ತಪಡಿಸಿದರು.

ಅವರು ಮಂಗಳವಾರ ಸುಳ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಮ್ಮ ಸಮುದಾಯವನ್ನು ಬಾಲಗಂಗಾಧರನಾಥ ಶ್ರೀಗಳು ಸುಳ್ಯದಲ್ಲಿ ಮನೆಮನೆಗಳಿಗೆ ತೆರಳಿ ಸಂಘಟಿಸಿ ಆ ಬಳಿಕ ಸುಳ್ಯದಿಂದ ಒಕ್ಕಲಿಗರ ಸಂಘಕ್ಕೆ ಪ್ರಥಮ ಬಾರಿಗೆ ಡಾ.ಕೆ.ವಿ.ಜಿ ಆಯ್ಕೆಯಾಗಿ ಆ ಬಳಿಕ ಸಮುದಾಯಕ್ಕೆ ನೀಡದ ಕೊಡುಗೆಗಳ ಕುರಿತು ನಿರ್ಮಾಲನಂದ ಶ್ರೀಗಳಲ್ಲಿ ಕೇಳಿ ತಿಳಿದುಕೊಳ್ಳಲಿ ಹಾಗೂ ಇತಿಹಾಸಗಳನ್ನು ತಿಳಿಯದೇ ಜಿಲ್ಲೆಯ ಸುಮಾರು 4 ಲಕ್ಷಕ್ಕು ಅಧಿಕ ಮತದಾರ ಒಕ್ಕಲಿಗರೆ ಅವಮಾನ ಮಾಡಿದ್ದು ಹೇಳಿಕೆಯನ್ನು ಹಿಂಪಡೆದುಕೊಳ್ಳಬೇಕು ಅಲ್ಲದೆ ಕರಾವಳಿ ಒಕ್ಕಲಿಗರ ಜೊತೆಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರಲ್ಲದೇ ಮುಂದೆ ಮಂಗಳೂರಿಗೆ ಬರುವ ಸಂಧರ್ಭದಲ್ಲಿ ತಕ್ಕ ಉತ್ತರವನ್ನು ನೀಡಲು ಒಕ್ಕಲಿಗರಿಗೆ ತಿಳಿದಿದೆ ಎಂದು ಭರತ್ ಮುಂಡೋಡಿ ಹೇಳಿದರು. ಯುವ ಗೌಡರ ಸೇವಾ ಸಂಘದ ಅಧ್ಯಕ್ಷ ಪಿ.ಎಸ್ ಗಂಗಾಧರ,ಜಾಕೆ ಸಂತೋಷ್,ದಿನೇಶ್ ಕ್ಷಮೆಯಾಚನೆಗೆ ಆಗ್ರಹಿಸಿದರು.ಸುದ್ದಿಗೋಷ್ಟಿಯಲ್ಲಿ ದೊಡ್ಡಣ್ಣ ಬರಮೇಲು, ಗೌಡ ಯುವ ಸೇವಾ ಸಂಘದ ಮಾಧ್ಯಮ ಸಂಯೋಜಕ ಸುಪ್ರಿತ್ ಮೋoಟಡ್ಕ ಉಪಸ್ಥಿತರಿದ್ದರು.

Leave a Reply

Discover more from

Subscribe now to keep reading and get access to the full archive.

Continue reading