ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ದೇವಚಳ್ಳ ಶಾಲೆಯಲ್ಲಿ ಪುಸ್ತಕ ವಿತರಣೆ

 

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುಸ್ತಕ ವಿತರಣೆ ಕಾರ್ಯಕ್ರಮವು ಜೂ. 27 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಜಯಾನಂದ ಪಟ್ಟೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜೇಸಿಐ 15 ವಲಯ ಅಧ್ಯಕ್ಷರಾದ ಜೆ ಎಫ್ ಎಸ್ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಅತಿಥಿಗಳಾಗಿ ಜೇಸಿಐ ವಲಯ- 15 ನೇತ್ರಾವತಿ (ರಿಜನ್ -ಬಿ) ಇದರ ಉಪಾಧ್ಯಕ್ಷ ಜೇಸಿ ಸೆನೆಟರ್ ಜಿತೇಶ್ ಪಿರೆರಾ, ಜೇಸಿಐ ಸುಳ್ಯ ಪಯಸ್ವಿನಿ ಇದರ ಅಧ್ಯಕ್ಷೆ ಜೆಎಫ್ಎಂ ಲತಾಶ್ರೀ ಸುಪ್ರೀತ್ ಮೊಂಟಡ್ಕ, ಶಾಲಾ ಮುಖ್ಯ ಶಿಕ್ಷಕ ಕುಶಾಲಪ್ಪ ತುಂಬತ್ತಾಜೆ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ವಿಟ್ಲ ಇದರ ಪ್ರತಿನಿಧಿ ಶ್ರೀಮತಿ ಮೋಹಿನಿ ವಿಶ್ವನಾಥ್, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶ್ರೀಮತಿ ದಿವ್ಯ , ಜೇಸಿಐ ಸುಳ್ಯ ಪಯಸ್ವಿನಿ ಇದರ ಕಾರ್ಯದರ್ಶಿ ಶ್ರೀಮತಿ ತಾರ ಮಾಧವ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಭಾರತ ಕೃಷಿ ಅಭಿವೃದ್ಧಿ ಸಂಘದ ವತಿಯಿಂದ ಕೊಡುಗೆ ಮಾಡಿದ ಗ್ಯಾಸ್ ಸ್ಟಾವ್ ನ್ನು ಶಾಲೆಗೆ ಹಸ್ತಾಂತರಿಸಲಾಯಿತು. ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಅಧ್ಯಕ್ಷರಾದ ಲತಾಶ್ರೀ ಸುಪ್ರೀತ್ ಮೋಂಟಡ್ಕರವರು ಸ. ಹಿ. ಪ್ರಾ. ಶಾಲೆ ದೇವಚಳ್ಳ ಇಲ್ಲಿಗೆ ಸುಮಾರು 45,000ಕ್ಕೂ ಅಧಿಕ ಮೌಲ್ಯದ ಪುಸ್ತಕಗಳನ್ನು ಶಾಲೆಗೆ ನೀಡಿದ್ದು ಶಿಕ್ಷಣ ಯೋಜನೆಯತ್ತ ಕೈ ಜೋಡಿಸಿದ್ದಾರೆ.

ಮುಖ್ಯ ಶಿಕ್ಷಕ ಕುಶಾಲಪ್ಪ ತುಂಬತ್ತಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವನಿತಾ ವಂದಿಸಿದರು.
ಶಿಕ್ಷಕ ಜೀವನ್ ತಳೂರು ಕಾರ್ಯಕ್ರಮ ನಿರೂಪಿಸಿದರು.

Leave a Reply

Discover more from

Subscribe now to keep reading and get access to the full archive.

Continue reading