ಮಗಳು ಕಪ್ಪಗಿದ್ದಾಳೆನ್ನುವ ಕಾರಣಕ್ಕೆ ಪ್ರಿಯಕರನ ಜತೆಗೂಡಿ ಹೆತ್ತ ಮಗಳನ್ನು ಕೊಲೆಗೈದ ಆರೋಪ: ಕೊನೆಗೂ ವಕೀಲ ವೃತ್ತಿಯ ತಾಯಿಯ ಬಂಧನ

ಬೆಂಗಳೂರು: ಕಳೆದೊಂದು ವಾರದಿಂದ ಇಡೀ ರಾಜ್ಯದಲ್ಲೇ ತೀವ್ರ ಸಂಚಲನ ಮತ್ತು ಆಕ್ರೋಶ ಸೃಷ್ಟಿಸಿದ್ದ ಪುಟಾಣಿ ವೆನ್ನಿಲಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ಸ್ವಂತ ತಾಯಿ ಪ್ರಿಯಾಂಕಾಳನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರದಲ್ಲಿರುವ ಸ್ನೇಹಿತೆಯ ಮನೆಯಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಬೆಂಗಳೂರಿನ ಕಾಡುಗೋಡಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.ಬಂಧನದ ಬಳಿಕ ಆರೋಪಿ ಪ್ರಿಯಾಂಕಾಳನ್ನು ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ಆಳವಾದ ತನಿಖೆಗಾಗಿ ಕೋರ್ಟ್ ಆರೋಪಿಯನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ.

ಮಗಳು ಕಪ್ಪಗಿದ್ದಾಳೆ ಎಂಬ ಕ್ರೂರ ಕಾರಣಕ್ಕಾಗಿ ಹೆತ್ತ ತಾಯಿ ಪ್ರಿಯಾಂಕಾ, ತನ್ನ ಪ್ರಿಯಕರ ಮೋಹನ್ ಜೊತೆ ಸೇರಿ ಮಗು ವೆನ್ನಿಲಾಳನ್ನು ಹತ್ಯೆ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿತ್ತು. ಘಟನೆ ಬಳಿಕ ಕಾಡುಗೋಡಿ ಪೊಲೀಸರು ಪ್ರಿಯಕರ ಮೋಹನ್‌ನನ್ನು ತಕ್ಷಣವೇ ಬಂಧಿಸಿದ್ದರು. ಆದರೆ ತಾಯಿ ಪ್ರಿಯಾಂಕಾ ತಲೆಮರೆಸಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಳು.

ಸದ್ಯ ಇಬ್ಬರೂ ಪ್ರಮುಖ ಆರೋಪಿಗಳು ಪೊಲೀಸ್ ವಶದಲ್ಲಿದ್ದು, ತೀವ್ರ ವಿಚಾರಣೆ ಮುಂದುವರಿದಿದೆ. ಹೆತ್ತ ಮಗಳನ್ನೇ ಕೊಲ್ಲಲು ಕೇವಲ ಮಗುವಿನ ಮೈಬಣ್ಣವೇ ಕಾರಣವೇ ಅಥವಾ ಇದರ ಹಿಂದೆ ಬೇರೆ ಏನಾದರೂ ಅಸಲಿ ರಹಸ್ಯವಿದೆಯೇ ಎಂಬುದು ಪೊಲೀಸರ ಮುಂದಿನ ವಿಚಾರಣೆಯಿಂದಷ್ಟೇ ಬೆಳಕಿಗೆ ಬರಬೇಕಿದೆ.

 

Leave a Reply

Discover more from

Subscribe now to keep reading and get access to the full archive.

Continue reading