ಪುತ್ತೂರಿನ ಮೆಡಿಕಲ್ ಕಾಲೇಜಿಗೆ ನಿಮ್ಮ ಲೋಗೋ: ಆಸಕ್ತರಿಗೆ ಅವಕಾಶ!

ಪುತ್ತೂರಿನಲ್ಲಿ ಹೊಸದಾಗಿ ತಲೆಎತ್ತಲಿರುವ ಹೆಮ್ಮೆಯ ಮೆಡಿಕಲ್ ಕಾಲೇಜಿಗೆ ಲೋಗೋ ಮತ್ತು ಟ್ಯಾಗ್‌ಲೈನ್ ವಿನ್ಯಾಸಗೊಳಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಕ್ರಿಯೇಟಿವ್ ಮೈಂಡ್ಸ್ ಹಾಗೂ ಆಸಕ್ತರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.


ನೀವು ತಯಾರಿಸುವ ಲೋಗೋ ಮತ್ತು ಟ್ಯಾಗ್‌ಲೈನ್‌ನಲ್ಲಿ ವೈದ್ಯಕೀಯ ಸೇವೆ, ಮಾನವೀಯತೆ, ಜ್ಞಾನ ಹಾಗೂ ಪುತ್ತೂರಿನ ಹೆಮ್ಮೆಯ ಅಂಶಗಳು ಅಡಕವಾಗಿರಬೇಕು. ಅತ್ಯುತ್ತಮವಾಗಿ ಮೂಡಿಬರುವ ಲೋಗೋ ಮತ್ತು ಆಕರ್ಷಕ ಟ್ಯಾಗ್‌ಲೈನ್‌ಗೆ ಆಕರ್ಷಕ ಬಹುಮಾನವನ್ನು ನೀಡಲಾಗುವುದು. ನಿಮ್ಮಲ್ಲಿರುವ ಸೃಜನಶೀಲತೆಯನ್ನು ಪ್ರದರ್ಶಿಸಲು ಇದೊಂದು ಸುವರ್ಣ ಅವಕಾಶವಾಗಿದೆ.


ಭಾಗವಹಿಸಲು ಇಚ್ಚಿಸುವವರು ತಮ್ಮ ವಿನ್ಯಾಸಗಳನ್ನು ಸಲ್ಲಿಸಲು ಜೂನ್ 20, 2026 ಕೊನೆಯ ದಿನಾಂಕವಾಗಿದೆ. ಸಿದ್ಧಪಡಿಸಿದ ಲೋಗೋ ಮತ್ತು ಟ್ಯಾಗ್‌ಲೈನ್‌ಗಳನ್ನು ಪುತ್ತೂರಿನ ಶಾಸಕರ ಕಚೇರಿಗೆ ಖುದ್ದಾಗಿ ತಲುಪಿಸಬಹುದು ಅಥವಾ 9900477528 ಮೊಬೈಲ್ ಸಂಖ್ಯೆಗೆ ಕಳುಹಿಸಿಕೊಡಬಹುದು.

Leave a Reply

Discover more from

Subscribe now to keep reading and get access to the full archive.

Continue reading