ಅರಂತೋಡಿನಲ್ಲಿ ಸಡಗರದ ಬಕ್ರೀದ್ ಆಚರಣೆ: ಸಾಮೂಹಿಕ ನಮಾಜ್

ಅರಂತೋಡು: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಪವಿತ್ರ ಬಕ್ರೀದ್ ಹಬ್ಬವನ್ನು ಅರಂತೋಡಿನ ಮುಸ್ಲಿಂ ಬಾಂಧವರು ಸಡಗರ-ಸಂಭ್ರಮದಿಂದ ಆಚರಿಸಿದರು.

ಇಲ್ಲಿನ ಸ್ಥಳೀಯ ಮಸೀದಿಯಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಸಾಮೂಹಿಕ ಈದ್ ನಮಾಜ್ ಹಮ್ಮಿಕೊಳ್ಳಲಾಗಿತ್ತು.

ಬಹು| ಆಸೀಫ್ ಆಝಹರಿ ಕೊಡಗು ಅವರ ನೇತೃತ್ವದಲ್ಲಿ ಇಸ್ಲಾಂ ಧರ್ಮದ ಬಾಂಧವರು ಅತ್ಯಂತ ಭಕ್ತಿ-ಶ್ರದ್ಧೆಯಿಂದ ನಮಾಜ್ ನಿರ್ವಹಿಸಿದರು. ಆ ಬಳಿಕ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸೌಹಾರ್ದತೆ ಮೆರೆದರು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಜಮಾಅತ್ ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯ ಸದಸ್ಯರುಗಳು ಸಕ್ರಿಯವಾಗಿ ಭಾಗವಹಿಸಿ, ಹಬ್ಬದ ಸಂಭ್ರಮವನ್ನು ಮುಗಿಲು ಮುಟ್ಟಿಸಿದರು.

Leave a Reply

Discover more from

Subscribe now to keep reading and get access to the full archive.

Continue reading