ಸಮಾಜ ಸೇವಕ ಮಂಜುನಾಥ ಮಡ್ತಿಲರಿಗೆ ಸನ್ಮಾನ: ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿ ಪ್ರಧಾನ

ಜೆಸಿಐ ಸುಳ್ಯ ಪಯಸ್ವಿನಿ ಘಟಕದ ಸಾಮಾನ್ಯ ಸಭೆಯು ಮೇ ಇಪ್ಪತ್ತಮೂರರಂದು ಜೆಸಿಐ ಭವನದಲ್ಲಿ ಜರುಗಿತು. ಈ ಸಭೆಯು ಘಟಕದ ಅಧ್ಯಕ್ಷರಾದ ಜೆ.ಎಫ್.ಎಂ. ಲತಾಶ್ರೀ ಸುಪ್ರೀತ್ ಮೊಂಟಡ್ಕ ಅವರ ಅಧ್ಯಕ್ಷತೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಈ ವಿಶೇಷ ಸಂದರ್ಭದಲ್ಲಿ, ಯಾವುದೇ ಪ್ರಚಾರವಿಲ್ಲದೆ ಸಾಮಾಜಿಕ ಕ್ಷೇತ್ರದಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮಂಜುನಾಥ್ ಮಡ್ತಿಲ ಅವರನ್ನು ಗುರುತಿಸಲಾಯಿತು. ಅವರಿಗೆ ಘಟಕದ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಜೆಸಿಐ ಸುಳ್ಯ ಪಯಸ್ವಿನಿಯ ನಿಕಟಪೂರ್ವ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಸಂಯೋಜಕರಾದ ಜೆ ಎಫ್ ಎಂ ಸುರೇಶ್ ಕಾಮತ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಸದಸ್ಯರಾದ ವಿಜಯ್ ಆಲೆಟ್ಟಿ, ಮುಖಂಡರಾದ ಸುಪ್ರೀತ್ ಮೊಂಟಡ್ಕ, ಜೆಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷರಾದ ಜೆಸಿ ಹೆಚ್ ಜಿ ಎಫ್ ಗುರುರಾಜ್ ಅಜ್ಜಾವರ, ಜೆಸಿ ಹೆಚ್ ಜಿ ಎಫ್ ನವೀನ್ ಕುಮಾರ್ ಹಾಗೂ ಜೆಸಿಐ ಪಯಸ್ವಿನಿ ಘಟಕದ ಸದಸ್ಯರು ಉಪಸ್ಥಿತರಿದ್ದರು.

Leave a Reply

Discover more from

Subscribe now to keep reading and get access to the full archive.

Continue reading