ಅಜ್ಜಾವರ ಸೆಕ್ಟರ್ ಸಾಹಿತ್ಯೋತ್ಸವ ಸಮಿತಿ ಅಸ್ತಿತ್ವಕ್ಕೆ

ಅಜ್ಜಾವರ:- ಸುನ್ನೀ ಸ್ಟುಡೆಂಟ್ ಫೆಡರೇಷನ್ (SSF) ಅಜ್ಜಾವರ ಸೆಕ್ಟರ್ ವತಿಯಿಂದ ಆಯೋಜಿಸಲಿರುವ 14ನೇ ಆವೃತ್ತಿಯ “ಸಾಹಿತ್ಯೋತ್ಸವ” ಕಾರ್ಯಕ್ರಮದ ಯಶಸ್ವಿ ನಿರ್ವಹಣೆಯ ಉದ್ದೇಶದಿಂದ ಪ್ರೋಗ್ರಾಂ ಸಮಿತಿಯನ್ನು ರಚಿಸಲಾಗಿದೆ.

ಸಮಿತಿಯ ಚೇರ್ಮನ್ ಆಗಿ ಮುಹಮ್ಮದ್ ಸವಾದ್ ಮದನಿ ಮೇನಾಲ ಅವರನ್ನು ಆಯ್ಕೆ ಮಾಡಲಾಗಿದ್ದು, ಕನ್ವೀನರ್ ಆಗಿ ಅಬ್ದುಲ್ ನಾಸಿರ್ ಪೈಂಬಚ್ಚಾಲ್ ನೇಮಕಗೊಂಡಿದ್ದಾರೆ. ಫೈನಾನ್ಸ್ ವಿಭಾಗದ ಜವಾಬ್ದಾರಿಯನ್ನು ಮುಸ್ತಫಾ ಅದನಿ ಮಂಡೆಕ್ಕೋಲ್ ವಹಿಸಿಕೊಂಡಿದ್ದು, ಮೀಡಿಯಾ ಮತ್ತು ಪ್ರಚಾರ ವಿಭಾಗದ ಹೊಣೆಗಾರಿಕೆಯನ್ನು ಮುಖ್ತಾರ್ ಸಅದಿ ಮೇನಾಲ ಅವರಿಗೆ ನೀಡಲಾಗಿದೆ.

ಇದಲ್ಲದೆ ಹಾಫಿಝ್ ಕಬೀರ್ ಹಿಮಾಮಿ ಕೊಯಂಗಿ, ತಾಜುದ್ದೀನ್ ಸಅದಿ ಅಡ್ಕ, ಜಾಫರ್ ಹಾಶಿಮಿ ಮಂಡೆಕ್ಕೋಲ್, ರುವೈಸ್ ಹಿಮಾಮಿ ಕೊಯಂಗಿ, ನೌಶಾದ್ ಅಡ್ಕಾರ್, ಮುಹಮ್ಮದ್ ಕುಂಞ್ಞಿ ಪೈಂಬಚ್ಚಾಲ್, ಸಫ್ವಾನ್ ಸುಣ್ಣಮೂಲೆ, ಅಬ್ಬಾಸ್ ಇರುವಂಬಳ್ಳ, ಸಾಬಿತ್ ಪೈಂಬಚ್ಚಾಲ್, ರಾಶಿದ್ ಇರುವಂಬಳ್ಳ, ಅಲಿ ಸುಣ್ಣಮೂಲೆ ಹಾಗೂ ಅಬ್ದುಲ್ ಮಾಲಿಕ್ ಕೊಯಂಗಿ ಅವರನ್ನು ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.

ಸಾಹಿತ್ಯ, ಸಾಂಸ್ಕೃತಿಕ ಹಾಗೂ ವೈಚಾರಿಕ ಚಟುವಟಿಕೆಗಳ ಸಮನ್ವಯದೊಂದಿಗೆ ನಡೆಯಲಿರುವ ಸಾಹಿತ್ಯೋತ್ಸವವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಸಮಿತಿ ಈಗಾಗಲೇ ವಿವಿಧ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿದೆ. ಕಾರ್ಯಕ್ರಮವನ್ನು ಅರ್ಥಪೂರ್ಣ ಹಾಗೂ ಮಾದರಿಯುತವಾಗಿ ರೂಪಿಸುವ ದಿಸೆಯಲ್ಲಿ ಸಮಿತಿಯು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ

Leave a Reply

Discover more from

Subscribe now to keep reading and get access to the full archive.

Continue reading