ಆ ನಂಬರ್ ಮತ್ತು ತಮಿಳುನಾಡಿನ ನೂತನ ಮುಖ್ಯಮಂತ್ರಿಯ ನಡುವಿನ ನಂಟಿನ ಕಾರಣ ಕೇಳಿದರೆ ನಿಮ್ಮ‌ಕಣ್ಣಾಲಿಗಳೂ ತೇವ ಆಗಬಹುದು….


ತಮಿಳುನಾಡಿನ ನೂತನ ಮುಖ್ಯಂತ್ರಿ  ದಳಪತಿ ವಿಜಯ್ ಅವರ ಗ್ಯಾರೇಜ್‌ಗೆ ಹೊಸ ಅತಿಥಿಯ ಆಗಮನವಾದಾಗುತ್ತದೆ ಅಂದಿಟ್ಟುಕೊಳ್ಳಿ. ಅದು ಬಿಎಂಡಬ್ಲ್ಯು ಎಲೆಕ್ಟ್ರಿಕ್ ಆಗಿರಲಿ ಅಥವಾ ದುಬಾರಿ ಲೆಕ್ಸಸ್ ಆಗಿರಲಿ, ಅಲ್ಲಿ ನಿಲ್ಲುವ ಪ್ರತಿಯೊಂದು ವಾಹನವೂ ರಾಜವೈಭವವನ್ನೇ ಸಾರುತ್ತದೆ. ಆದರೆ ಅಷ್ಟು ಐಷಾರಾಮಿ ಕಾರುಗಳ ನಡುವೆಯೂ ಎಲ್ಲರ ಕಣ್ಣು ಹೋಗಿ ನಿಲ್ಲುವುದು ಆ ನಂಬರ್ ಪ್ಲೇಟ್ ಮೇಲೆ ಮಾತ್ರ.

ಅಲ್ಲಿ ನಿಂತಿರುವ ಕಾರುಗಳು ಬೇರೆ ಬೇರೆಯಾದರೂ, ಆ ಎಲ್ಲದರ ನಂಬರ್ ಪ್ಲೇಟ್‌ನಲ್ಲಿ ಮಾತ್ರ ಒಂದೇ ಒಂದು ರಹಸ್ಯ ಸಂಖ್ಯೆ ಅಚ್ಚಾಗಿರುತ್ತದೆ. ಅದುವೇ 0277.
ಯಾರಿಗೂ ತಿಳಿಯದ ಆ ನಿಗೂಢ ಸಂಖ್ಯೆಯ ಹಿಂದಿನ ರಹಸ್ಯವೇನು? ದಳಪತಿಯ ಪ್ರತಿ ಪ್ರಯಾಣದಲ್ಲೂ ಈ ಸಂಖ್ಯೆ ಅವರ ಬೆನ್ನಿಗಿರುವುದರ ಉದ್ದೇಶವೇನು ಎಂಬ ಕುತೂಹಲ ಜನರಲ್ಲಿ ಮನೆ ಮಾಡಬಹುದು. ಇದು ಕೇವಲ ಕಾಕತಾಳೀಯವೋ ಅಥವಾ ಇದರ ಹಿಂದೆ ಯಾವುದಾದರೂ ಸಂಚಿದೆಯೋ ಎಂದು ಹುಡುಕುತ್ತಾ ಹೋದಾಗ ಸಿಗುವ ಉತ್ತರ ಕಣ್ಣಾಲಿಗಳನ್ನು ತೇವಗೊಳಿಸುತ್ತದೆ.

ವಾಸ್ತವದಲ್ಲಿ, 0277 ಎಂಬುದು ಕೇವಲ ಒಂದು ಸಂಖ್ಯೆಯಲ್ಲ. ಅದು 1977 ಫೆಬ್ರವರಿ 14ರ ಒಂದು ಕರಾಳ ನೆನಪು. ಅಂದು ಜನಿಸಿದ ಪುಟ್ಟ ದೇವತೆ ವಿದ್ಯಾ, ಕೇವಲ ಎರಡು ವರ್ಷಕ್ಕೆ ಈ ಜಗತ್ತನ್ನೇ ಮೌನವಾಗಿಸಿ ಮರೆಯಾಗಿದ್ದಳು. ತನ್ನ ಮುದ್ದಿನ ತಂಗಿಯನ್ನು ಕಳೆದುಕೊಂಡ ಆ ದಿನ, ಅಂದು ಚಿಕ್ಕ ಹುಡುಗನಾಗಿದ್ದ ವಿಜಯ್ ಸಂಪೂರ್ಣ ಬದಲಾಗಿಬಿಟ್ಟರು. ಮಾತು ನಿಲ್ಲಿಸಿ ಅಂತರ್ಮುಖಿಯಾದರು.

ವರ್ಷಗಳು ಉರುಳಿದವು, ವಿಜಯ್ ಸೂಪರ್ ಸ್ಟಾರ್ ಆದರು. ಆದರೆ ಆ ನೋವು ಮಾತ್ರ ಹಾಗೆಯೇ ಇತ್ತು. ತನ್ನ ತಂಗಿಯ ನೆನಪನ್ನು ಅಳಿಯದಂತೆ ಮಾಡಲು ಅವರು ಕಂಡುಕೊಂಡ ದಾರಿ ಈ ನಂಬರ್ ಪ್ಲೇಟ್. ಫೆಬ್ರವರಿ ತಿಂಗಳ 02 ಮತ್ತು ಜನಿಸಿದ ವರ್ಷದ 77 ಸೇರಿ ಆ 0277 ಜನ್ಮ ತಳೆಯಿತು.

ಅಷ್ಟೇ ಅಲ್ಲ, ತನ್ನ ಮಗಳಿಗೆ ದಿವ್ಯಾ ಸಾಶಾ ಎಂದು ಹೆಸರಿಡುವ ಮೂಲಕ ಆಕೆಯಲ್ಲಿ ವಿದ್ಯಾಳನ್ನು ಕಾಣುತ್ತಿದ್ದಾರೆ. ಇಂದು ವಿಜಯ್ ಅವರ ಬದುಕು ದೊಡ್ಡದು, ಅವರ ರಾಜಕೀಯ ಪ್ರಯಾಣ ಇನ್ನು ದೊಡ್ಡದು. ಆದರೆ ಆ ಕೋಟಿ ಕೋಟಿ ಬೆಲೆಯ ಕಾರುಗಳ ವೇಗದಲ್ಲೂ, 0277 ಎಂಬ ಈ ಸಣ್ಣ ಸಂಖ್ಯೆ ಅವರ ಜೊತೆಗಿರುವ ತಂಗಿಯ ಆತ್ಮದಂತೆ ಸದಾ ಅವರ ಹಿಂದೆಯೇ ಇರುತ್ತದೆ.
ಇಂದಿಗೂ ವಿಜಯ್ ಅವರ ಪ್ರತಿ ಮೌನದ ಹಿಂದೆ ಆ 0277 ಎಂಬ ಸಂಖ್ಯೆ ಒಂದು ಅಳಿಸಲಾಗದ ಕಥೆಯನ್ನು ಹೇಳುತ್ತಲೇ ಇದೆ.

Leave a Reply

Discover more from

Subscribe now to keep reading and get access to the full archive.

Continue reading