ನೂರುಲ್ ಇಸ್ಲಾಂ ಮದ್ರಸ ಗುತ್ತಿಗಾರು SBS ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

ಸುಳ್ಯ: ನೂರುಲ್ ಇಸ್ಲಾಂ ಮದ್ರಸ ಗುತ್ತಿಗಾರು (6202) ಇಲ್ಲಿನ ವಿದ್ಯಾರ್ಥಿಗಳ ಸಂಘಟನೆಯಾದ SBS ಇದರ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯು ಸದರ್ ಉಸ್ತಾದರಾದ ಸುಲೈಮಾನ್ ಸಅದಿ ಉಸ್ತಾದರ ಅಧ್ಯಕ್ಷತೆಯಲ್ಲಿ ದಿನಾಂಕ 03-05-2026 ಆದಿತ್ಯವಾರ ಬೆಳಿಗ್ಗೆ 7 ಗಂಟೆಗೆ ನಡೆಯಿತು. ಸದರ್ ಉಸ್ತಾದರ ದುಆದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.

ಅಧ್ಯಾಪಕರಾದ ಸ್ವಾದಿಕ್ ಫಾಳಿಲಿ ಉಸ್ತಾದರು ಸ್ವಾಗತಿಸಿದರು. ಸಭೆಯಲ್ಲಿ ಕಳೆದ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಲಾಯಿತು. ಬಳಿಕ ನಡೆದ ನೂತನ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಮುಹಮ್ಮದ್ ಅಸ್ಕರ್ , ಪ್ರ. ಕಾರ್ಯದರ್ಶಿಯಾಗಿ ಮುಹಮ್ಮದ್ ಸುನೈದ್ ಹಾಗೂ ಕೋಶಾಧಿಕಾರಿಯಾಗಿ ಮುಹಮ್ಮದ್ ಇಯಾಸ್ ರವರನ್ನು ಹಾಗೂ ಮದ್ರಸಾ ನಾಯಕನಾಗಿ ಮುಹಮ್ಮದ್ ಝೈದ್ ರವರನ್ನು ನಾಯಕಿಯಾಗಿ ಫಾತಿಮತ್ ರಿಯಾನ ರನ್ನು ಆಯ್ಕೆಮಾಡಲಾಯಿತು.

ಬಳಿಕ ನಡೆದ ಸಭೆಯಲ್ಲಿ ಉಳಿದ ಸ್ಥಾನಗಳಿಗೂ ಆಯ್ಕೆ ಪ್ರಕ್ರಿಯೆ ನಡೆಯಿತು. ಮದ್ರಸ ಕಮಿಟಿ ಉಸ್ತುವಾರಿ ಅಧ್ಯಕ್ಷರಾದ ಹಮೀದ್ ಎಚ್ ಎಂ ರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸರ್ವರಿಗೂ ಸಿಹಿಹಂಚಿ ,ಸ್ವಲಾತ್, ಸಲಾಮಿನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

ನಿಮ್ಮದೊಂದು ಉತ್ತರ