ಪಾಟ್ರುಕೋಡಿ ಕುದುಂಬ್ಲಾಡಿಯಲ್ಲಿ ಜಲಾಲಿಯ್ಯ ಮತ್ತು ಮದನೀಯಂ

ಮಾಣಿ ಸಮೀಪದ ಪಾಟ್ರಕೋಡಿ ಕುದುಂಬ್ಲಾಡಿಯಲ್ಲಿರುವ ಅಲ್ ಮುರ್ಶಿದ್ ಅಕಾಡೆಮಿ ಕ್ಯಾಂಪಸ್ ಆಶ್ರಯದಲ್ಲಿ ಮೇ 9ರ ಶನಿವಾರ ಮಗ್ರಿಬ್ ಬಳಿಕ ತ್ರೈಮಾಸಿಕ ಜಲಾಲಿಯ್ಯಾ ರಾತೀಬ್ ಹಾಗೂ ಮದನೀಯಂ ಆಧ್ಯಾತ್ಮಿಕ ಕಾರ್ಯಕ್ರಮವು ಕ್ಯಾಂಪಸ್ ಮೈದಾನದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಅವರು ದುಆ ನೇತೃತ್ವ ನೀಡಲಿದ್ದಾರೆ. ಆಧ್ಯಾತ್ಮಿಕ ಸಂಗಮದಲ್ಲಿ ಹಲವಾರು ಸಯ್ಯಿದ್‌ಗಳು, ಉಲಮಾ ಉಮರಾ ನೇತಾರರು ಹಾಗೂ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಸಾರಥಿ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಅ್‌ಮಿನೀಂಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.

Leave a Reply

Discover more from

Subscribe now to keep reading and get access to the full archive.

Continue reading