ಸುಳ್ಯ: ಇತ್ತೀಚೆಗೆ ಪ್ರಕಟಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಸುಳ್ಯದ ನಾವೂರು ನಿವಾಸಿ ರಿಝಾ ಟಿ.ಜೆ ಅವರು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಸಾಧನೆ ಮಾಡಿದ್ದಾರೆ.
ನವೂರು ನಿವಾಸಿ ಝಕರಿಯಾ ಟಿ.ಎ (ರಿಝಾ ಬ್ಯಾಗ್ಸ್) ಮತ್ತು ಜಮೀಲಾ ದಂಪತಿಯ ಪುತ್ರಿಯಾಗಿರುವ ರಿಝಾ ಟಿ.ಜೆ ಅವರು ಪರೀಕ್ಷೆಯಲ್ಲಿ ಒಟ್ಟು 625 ಅಂಕಗಳಿಗೆ 603 ಅಂಕಗಳನ್ನು (96.48%) ಪಡೆಯುವ ಮೂಲಕ ವಿಶಿಷ್ಟ ಶ್ರೇಣಿ (Distinction) ಪಡೆದುಕೊಂಡಿದ್ದಾರೆ.





ವಿದ್ಯಾರ್ಥಿನಿಯ ಈ ಸಾಧನೆಗೆ ಪೋಷಕರ ಪ್ರೋತ್ಸಾಹ ಹಾಗೂ ಶಿಕ್ಷಕರ ಮಾರ್ಗದರ್ಶನವೇ ಕಾರಣವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿನಿಯ ಈ ಶೈಕ್ಷಣಿಕ ಯಶಸ್ಸಿಗೆ ಸ್ಥಳೀಯರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ. ತಂದೆ ಝಕರಿಯಾ ಅವರು ವ್ಯಾಪಾರಿಯಾಗಿದ್ದು, ತಾಯಿ ಜಮೀಲಾ ಅವರು ಗೃಹಿಣಿಯಾಗಿದ್ದಾರೆ. ತಮ್ಮ ಮಗಳ ಈ ಸಾಧನೆಯು ಕುಟುಂಬಕ್ಕೆ ಹೆಮ್ಮೆ ತಂದಿದೆ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.





