ಮಾಣಿ: ದಾರುಲ್ ಇರ್ಶಾದ್ ಅಧೀನದ ಮಿತ್ತೂರು ಕೆಜಿಎನ್ ಕ್ಯಾಂಪಸ್ ನಲ್ಲಿ ಕಾರ್ಯಾಚರಿಸುತ್ತಿರುವ ಜೂನಿಯರ್ ದಅವಾ ವಿಭಾಗದ ದಾರುಲ್ ಇರ್ಶಾದ್ ಬಾಲಕರ ಪ್ರೌಢಶಾಲೆಯು 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನೂರು ಶೇಕಡ ಫಲಿತಾಂಶ ದಾಖಲಿಸಿದೆ. ಹದಿಮೂರು ವರ್ಷಗಳಿಂದ ದಾರುಲ್ ಇರ್ಶಾದ್ ಬಾಲಕರ ಪ್ರೌಢಶಾಲೆಯು ಎಸ್ಸೆಸ್ಸೆಲ್ಸಿ ನೂರು ಶೇಕಡಾ ಫಲಿತಾಂಶ ದಾಖಲಿಸುತ್ತಾ ಬಂದಿದೆ.
ಅಹ್ಮದ್ ಮನಾಸಿರ್ ಕರ್ನೂರ್ 574 (ಶೇ 91.84%) ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ದಾಖಲಿಸಿದರೆ, ಅಬ್ದುಲ್ ಖಾದರ್ ಸುಜಾಹ್ ಪೇರಾಜೆ 568(90.88%) ದ್ವಿತೀಯ ಸ್ಥಾನಿಯಾಗಿದ್ದಾರೆ.
ಅಹ್ಮದ್ ಶಮೀಲ್ ಕೇಪೆಜಾಲು 567(90.77%) ತೃತೀಯ ಗಳಿಸಿದ್ದಾರೆ. ಮುಆಝ್ ಅರಿಯಡ್ಕ 566(90.56%) ನಾಲ್ಕನೆ ಸ್ಥಾನ ಗಳಿಸಿದ್ದಾರೆ.

