



ಚಾರ್ಮಾಡಿ ಘಾಟ್ ನ ಆರನೇ ತಿರುವಿನಲ್ಲಿ ಪಿಕಪ್ ಒಂದು ಪಲ್ಟಿಯಾಗಿ ಹತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಎಪ್ರಿಲ್ 21 ರಂದು ಬಳ್ಳಾರಿ ಗದಗ ಕಡೆಯ ಸುಮಾರು 25 ಕೂಲಿ ಕಾರ್ಮಿಕರನ್ನು ಹೊತ್ತು ಚಾರ್ಮಾಡಿ ಘಾಟ್ ಇಳಿಯುತ್ತಿದ್ದ ಪಿಕಪ್ ಪಲ್ಟಿಯಾಗಿದ್ದು ಬಹುತೇಕ ಕಾರ್ಮಿಕರೂ ಗಾಯಗೊಂಡಿದ್ದು ಹತ್ತು ಮಂದಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಂಬುಲೆನ್ಸ್ ಗಳ ಮೂಲಕ ಬೆಳ್ತಂಗಡಿ ಆಸ್ಪತ್ರೆಗೆ ದಾಖಲು ಮಾಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆನ್ನಲಾಗಿದೆ

