ಮೂಲತಃ ಸುಳ್ಯದ ಮುರುಳ್ಯ ಗ್ರಾಮದ ಕುದ್ಪಾಜೆ ಮನೆತನದ ಡಾ.ಅಕ್ಷಯ್ ಕುದ್ಪಾಜೆಯವರ ಮಾಲಕತ್ವದ ಡಾ.ಕುದ್ಪಾಜೆ ಕ್ಲಿನಿಕ್ ಉತ್ತರ ಬೆಂಗಳೂರಿನ ಕೋಗಿಲು ಮೈನ್‌ರೋಡ್, ವಲ್ಡ್ ಮೇಲೆರಿಯಂ ಸ್ಕೂಲ್ ಮುಂಭಾಗದದ ಬಿಲ್ಡಿಂಗ್‌ನಲ್ಲಿ ಎ.8 ರಂದು ಶುಭಾರಂಭಗೊಂಡಿತು.





ಕ್ಲಿನಿಕ್‌ನ್ನು ಡಾ.ಅಕ್ಷಯ್‌ವರ ತಂದೆಯವರಾದ ಶಿವಪ್ಪ ಗೌಡ ಕುದ್ಪಾಜೆ ಉದ್ಘಾಟಿಸಿ, ಶುಭಹಾರೈಸಿದರು. ಮಾತೃಶ್ರೀಯವರಾದ ಎಂ. ಚಂದ್ರಪ್ರಭ ಸೇರಿದಂತೆ ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದು, ಶುಭ ಹಾರೈಸಿದರು.
ಇಲ್ಲಿ Head Neck Surgery & Cancer ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇದರೊಂದರಿಗೆ ಸ್ವರಕ್ಕೆ ಸಂಬಂಧಿತ ಸಮಸ್ಯೆ, ಉಸಿರಾಟದ ತೊಂದರೆ, ಇಎನ್‌ಟಿ ಚಿಕಿತ್ಸೆ ನೀಡಲಾಗುತ್ತಿದ್ದು, ಉತ್ತಮ ವೈದ್ಯಕೀಯ ತಂಡವಿದೆ.
ಕ್ಲಿನಿಕ್ ಸೋಮವಾರದಿಂದ ಶಿನಿವಾರದ ತನಕ ಸಂಜೆಯಿಂದ 8 ಗಂಟೆಯವರೆಗೆ ತೆರೆದಿರುತ್ತದೆ.

