ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಗೊಳ್ಯಾಡಿಯ ಹಿತಾ ಗೊಳ್ಯಾಡಿ ಅವರು ಪಿಯುಸಿ ವಿಜ್ಞಾನ ವಿಭಾಗದಲ್ಲಿ 600 ರಲ್ಲಿ 590 ಅಂಕ ಪಡೆಯುವ ಮೂಲಕ ರಾಜ್ಯದಲ್ಲಿ ಹತ್ತನೇ ರಾಂಕ್ ಪಡೆದು ಸಾಧನೆ ಮಾಡಿದ್ದಾರೆ.
ಇವರು ವಸಂತಮಾಲ ಮತ್ತು ದಿನೇಶ್ ಗೊಳ್ಯಾಡಿ ಅವರ ಸುಪುತ್ರಿ.
ಗ್ರಾಮೀಣ ಭಾಗದ ಹೆಣ್ಣುಮಗಳ ಈ ಸಾಧನೆಗೆ ಊರವರು ಹರ್ಷ ವ್ಯಕ್ತಪಡಿಸಿದ್ದಾರೆ.






